ಗಾಳಿ ಮತ್ತು ಸ್ಟಾರ್ ಲೈನರ್ ಘರ್ಷಣೆಯಿಂದ ಸುಟ್ಟು ಹೋಗಬಹುದು : ಸುನೀತಾ ವಿಲಿಯಮ್ಸ್ ಬಗ್ಗೆ ಶಾಕಿಂಗ್ ನ್ಯೂಸ್
ಕಳೆದ ಎರಡು ತಿಂಗಳಿನಿಂದ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ಭೂಮಿಗೆ ಕರೆತರುವುದಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಸುನೀತಾ ವಿಲಿಯಮ್ಸ್ ಜೊತೆಗೆ ಇನ್ನೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಕೂಡ ಸಿಲುಕಿಕೊಂಡಿದ್ದಾರೆ. ಇದೀಗ ಈ ಇಭರು ಗಗನಯಾತ್ರಿಗಳು ಭೂಮಿಗೆ ಬರುವುದರ ಬಗ್ಗೆ ಅಮೆರಿಕಾದ ಮಾಜಿ ಮಿಲಿಟರಿ ಕಮಾಂಡರ್ ರೂಡಿ ರಿಢಾಲ್ಫು ಭಯಾನಕ ಸತ್ಯವೊಂದನ್ನ ಹೇಳಿದ್ದಾರೆ.
ಇಬ್ಬರು ಬಾಹ್ಯಾಕಾಶ ನೌಕೆಯಿಂದ ಹಿಂತಿರುಗಿಸಲು ಪ್ರಯತ್ನಿಸುವಾಗ ಗಾಳಿ ಮತ್ತು ಸದಟಾರ್ ಲೈನರ್ ಘರ್ಷಣೆಯಿಂದ ಸುಟ್ಟು ಹೋಗುವ ಲಕ್ಷಣವಿದೆ. ಶಾಖದಿಂದ ಗಗನಯಾತ್ರಿಗಳು ಸಾಯಬಹುದು. ಈ ವೇಳೆ 96 ಗಂಟೆಗಳ ಆಮ್ಲಜನಕ ಪೂರೈಕೆಯನ್ನು ಹೊಂದಿರುತ್ತಾರೆ. ಬೋಯಿಂಗ್ ಸ್ಟಾರ್ ಲೈನರ್ ರನ್ನು ಸುರಕ್ಷಿತವಾಗಿ ಭೂಮಿಗೆ ತರಬೇಕಾಗುತ್ತದೆ. ತಾಂತ್ರಿಕವಾಗಿ ಮತ್ತು ಸರಿಯಾದ ಕೋನದಲ್ಲಿ ತರಬೇಕು. ಆದರೆ ತರುವಾಗ ಭಯಾನಕ ಸವಾಲುಗಳು ಎದುರಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯು ಬೌನ್ಸ್ ಆಗಬಹುದು. ಆವಿಯಾಗುವ ಸಾಧ್ಯತೆಯೂ ಇದೆ. ಈ ಎರಡು ಸಮಯದಲ್ಲಿ ಅವರು ತೀರಾ ಕಡಿದಾದ ವಾತಾವರಣ ಹೊಂದಿರುತ್ತಾರೆ. ಗಾಳಿ ಮತ್ತು ಸ್ಟಾರ್ ಲೈನರ್ ಘರ್ಷಣೆಯಿಂದ ಗಗನಯಾತ್ರಿಗಳು ಸುಟ್ಟು ಹೋಗುವ ಲಕ್ಷಣಗಳು ಇದಾವೆ. ಕೇವಲ ಹತ್ತು ದಿನಗಳ ಬಾಹ್ಯಾಕಾಶ ಯಾತ್ರೆಗೆ ತೆರಳಿದ್ದ ಇಬ್ಬರು ಗಗನಯಾತ್ರುಗಳು ಸದ್ಯ ಅಲ್ಲಿಯೇ ಉಳಿದುಕೊಂಡಿದ್ದಾರೆ. ತಾಂತ್ರಿಕ ದೋಷದಿಂದ ಎರಡು ತಿಂಗಳಿಗೂ ಅಧಿಕ ದಿನ ಕಳೆಯುತ್ತಾ ಬಂದಿದ್ದಾರೆ. ಇನ್ನೊಂದು ಮಾರ್ಗದ ಮೂಲಕ ಅವರನ್ನು ಕರೆತರುವ ಯೋಜನೆಯಲ್ಲಿದೆ. ಈ ಯೋಜನೆಯ ಮೂಲಕ ಅವರು ಭೂಮಿಗೆ ಹಿಂತಿರುಗುವುದೇ ಆದರೆ 2025ರ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಬರಲಿದ್ದಾರೆ.