Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೇಂದ್ರ ಬಜೆಟ್ ಬೆನ್ನಲ್ಲೇ ಚಿನ್ನದ ದರ ಇಳಿಕೆ : ಎಷ್ಟು ಕಡಿಮೆ ಆಯ್ತು..?

08:49 PM Jul 25, 2024 IST | suddionenews
Advertisement

ಚಿನ್ನದ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು. ಚಿನ್ನ ಪ್ರಿಯರಿಗೆ ಇದು ಶಾಕಿಂಗ್ ಎನಿಸಿತ್ತು. ಚಿನ್ನ ಕೊಳ್ಳಬೇಕೆಂದುಕೊಂಡವರು ಯೋಚನೆ ಮಾಡಬೇಕಾಗಿತ್ತು. ಆದರೆ ಕೇಂದ್ರ ಬಜೆಟ್ ಮಂಡನೆಯ ಬೆನ್ನಲ್ಲೇ ಕೊಂಚ ಬೆಲೆ ಇಳಿಕೆಯಾಗಿದೆ. ಹಾಗಂತ ದೊಡ್ಡ ಮಟ್ಟದ ಬೆಲೆ ಏನು ಇಳಿಕೆಯಾಗಿಲ್ಲದೆ ಇರಬಹುದು. ಆದರೆ ಕೊಂಚ ಕಡಿಮೆಯಾಗಿರುವುದು ಚಿನ್ನ ಪ್ರಿಯರಿಗೆ ನಿರಾಳ ಎನಿಸಿದೆ.

Advertisement

ಇಂದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಪ್ರಮಾಣ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಗ್ರಾಂಗೆ 95 ರೂಪಾಯಿ ಹಾಗೂ 24 ಕ್ಯಾರೆಟ್ ಗೆ ಚಿನ್ನದ ಬೆಲೆಯಲ್ಲಿ 104 ರೂಪಾಯಿ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಒಂದು ಗ್ರಾಂಗೆ 6,400 ರೂಪಾಯಿ ಆಗಿದೆ. ಹತ್ತು ಗ್ರಾಂಗೆ 64,000 ಸಾವಿರ ರೂಪಾಯಿ ಆಗಿದೆ.

ಬೆಳ್ಳಿ ದರದಲ್ಲಿಯೂ ಕಡಿಮೆಯಾಗಿದ್ದು, ಒಂದು ಗ್ರಾಂಗೆ ₹ 84.50 ಹಾಗೂ 8 ಗ್ರಾಂಗೆ ₹ 676 ಇದೆ. 10 ಗ್ರಾಂ ₹ 845 ಹಾಗೂ 1 ಕಿಲೋಗ್ರಾಂ ₹ 84,500 ಬೆಲೆ ಬಾಳುತ್ತದೆ. ಈ ಮೂಲಕ ಚಿನ್ನ ಬೆಳ್ಳಿ ದರದಲ್ಲಿ ಸಾಕಷ್ಟು ಬೆಲೆ ಕಡಿಮೆಯಾಗಿದೆ. ಚಿನ್ನ ಬೆಳ್ಳಿ ಖರೀದಿ‌ ಮಾಡಬೇಕೆಂದುಕೊಂಡವರಿಗೆ ಸಂತಸ ತಂದಿದೆ. ಸದ್ಯ ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆಯಲ್ಲಿ ಚಿನ್ನದ ಮೇಲಿನ ಸುಂಕ ಕಡಿಮೆ ಮಾಡಿದ್ದು, ಇಂದಿನಿಂದಾನೇ ಜಾರಿಗೆ ಬಂದಿದೆ. ಚಿನ್ನ ತೆಗೆದುಕೊಳ್ಳಬೇಕು ಎಂದುಕೊಂಡವರು, ಅದಕ್ಕಾಗಿ ಚೀಟಿ ಹಾಕುತ್ತಿದ್ದವರಿಗೆ ಕೊಂಚ ಚಿನ್ನ ಹೆಚ್ಚಿನ ಗ್ರಾಂ ಸಿಗಲಿದೆ.

Advertisement

ಸದ್ಯ 22 ಕ್ಯಾರೆಟ್ ಚಿನ್ನ ದೆಹಲಿಯಲ್ಲಿ ಒಂದು ಗ್ರಾಂಗೆ 6,415 ರೂಪಾಯಿ ಇದೆ. 24 ಕ್ಯಾರೆಟ್ 6,995 ರೂಪಾಯಿ ಇದೆ. ಮುಂಬೈನಲ್ಲಿ 6,400 ರೂಪಾಯಿ ಇದೆ. ಚೆನ್ನೈನಲ್ಲಿ 6,430 ಇದೆ.

Advertisement
Tags :
bengaluruCentral budgetchitradurgagold price decreasedGold price downsuddionesuddione newsUnion budgetಕೇಂದ್ರ ಬಜೆಟ್ಚಿತ್ರದುರ್ಗಚಿನ್ನದ ದರ ಇಳಿಕೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article