Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಷ್ಟಕ್ಕೂ 31 ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ನಡೆದದ್ದು ಏನು..?

02:03 PM Jan 02, 2024 IST | suddionenews
Advertisement

 

Advertisement

ಹುಬ್ಬಳ್ಳಿ: ರಾಮಮಂದಿರದ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ 31 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಗಲಾಟೆ ನಡೆದಿತ್ತು. ಈ ಗಲಾಟೆ ಸಂಬಂಧ ಈಗ ಶ್ರೀಕಾಂತ್ ಪೂಜಾರಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಆರ್ ಎಸ್ ಎಸ್ ನಾಯಕರು, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟಕ್ಕೂ ಅಂದು ಹುಬ್ಬಳ್ಳಿಯಲ್ಲಿ ಅಂದು ಆಗಿದ್ದಾದರೂ ಏನು ಗೊತ್ತಾ..?

ಹುಬ್ಬಳ್ಳಿಯಲ್ಲಿ ಅಂದು 1992 ಡಿಸೆಂಬರ್ 5 ರಂದು ನಗರದಲ್ಲಿ ವಾತಾವರಣ ಭುಗಿಲೆದ್ದಿತ್ತು. ಡಿಸೆಂಬರ್ 6 ರಂದು ಕರಸೇವೆಗೂ ಮುನ್ನ ನಗರದಲ್ಲಿ ಗಲಭೆ ಎದ್ದಿತ್ತು. ಇಡೀ ದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಯುತ್ತಿತ್ತು. ವಿಐಪಿ, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಈ ಹೋರಾಟವನ್ನು ಕೈಗೆತ್ತಿಕೊಂಡಿತ್ತು. ಸಾರ್ವಜನಿಕರ ಆಸ್ತಿ - ಪಾಸ್ತಿಗೆ ನಷ್ಟ ಮಾಡುವಂತ ಘಟನೆಗಳು ನಡೆದಿವೆ. ಘಟನೆ ಸಂಬಂಧ ಅಂದು 9 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣ ಇಲ್ಲಿಯವರೆಗೂ ಪೆಂಡಿಂಗ್ ಉಳಿದಿತ್ತು.

Advertisement

ಆರೋಪಿಗಳಾದ ರಾಜು, ಅಶೋಕ್ ಕಲಬುರಗಿ, ಗುರುನಾಥ ಕಾಟಗಾರ್, ರಾಮಚಂದ್ರ ಕಲಬುರಗಿ, ಮೃತ ಕಲಬುರಗಿ ಸೇರಿದಂತೆ ಹಲವರ ಹುಡುಕಾಟಕ್ಕೆ ಪೊಲೀಸರು ಶುರು ಮಾಡುತ್ತಾರೆ. ಇದೀಗ ಆ ಕೇಸಿಗೆ ಸಂಬಂಧಪಟ್ಟಂತೆ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆ. ರಾಮ ಮಂದಿರ ಉದ್ಘಾಟನೆಯ ಹೊತ್ತಲ್ಲಿಯೇ ಈ ರೀತಿ ಬಂಧಿಸಿದ್ದನ್ನು ಬಿಜೆಪಿ ನಾಯಕರು ಖಂಡಿಸುತ್ತಿದ್ದಾರೆ. ಹೋರಾಟದ ಎಚ್ಚರಿಕೆನ್ನು ನೀಡಿದ್ದಾರೆ.

Advertisement
Tags :
featuredhubballihublisuddioneಸುದ್ದಿಒನ್ಹುಬ್ಬಳ್ಳಿ
Advertisement
Next Article