For the best experience, open
https://m.suddione.com
on your mobile browser.
Advertisement

ಪ್ರವರ್ಗ 3ಕ್ಕೆ ಸೇರಿಸಿದ್ದು ಒಳ್ಳೆಯದಲ್ಲ : ಹಳ್ಳಿಕಾರ್ ಸಮುದಾಯಕ್ಕೆ ಸಿಎಂ ಗುಡ್ ನ್ಯೂಸ್

04:42 PM Oct 27, 2024 IST | suddionenews
ಪ್ರವರ್ಗ 3ಕ್ಕೆ ಸೇರಿಸಿದ್ದು ಒಳ್ಳೆಯದಲ್ಲ   ಹಳ್ಳಿಕಾರ್ ಸಮುದಾಯಕ್ಕೆ ಸಿಎಂ ಗುಡ್ ನ್ಯೂಸ್
Advertisement

ಬೆಂಗಳೂರು: ಇಂದು ರಾಜ್ಯ ಹಳ್ಳಿಕಾರ್ ಸಂಘ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಸಮಾವೇಶದಲ್ಲಿಯೇ ಸಮುದಾಯಕ್ಕೆ ಗುಡ್ ನ್ಯೂಸ್ ನೀಡಿದ್ದಾರೆ. ಈಗಾಗಲೇ ಪ್ರವರ್ಗ 3ಕ್ಕೆ ಸೇರಿಸಲಾಗಿದೆ. ಆದರೆ ಅದು ಸರಿ ಅಲ್ಲ ಅಂತ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.

Advertisement

ನನಗೆ ಹಳ್ಳಿಕಾರ್ ಸಮುದಾಯದ ಬಗ್ಗೆ ಸಹಾನುಭೂತಿ ಇದೆ. ಖಂಡಿತಾ ಸಹಾಯ ಮಾಡುತ್ತೇನೆ. ಹಳ್ಳಿಕಾರ್ ಸಮುದಾಯವನ್ನು ಪ್ರವರ್ಗ 3ಕ್ಕೆ ಸೇರಿಸಿದ್ದು ಸರಿಯಲ್ಲ. ಪ್ರವರ್ಗ 1ಕ್ಕೆ ಸೇರಿಸಬೇಕೆಂಬ ಬೇಡಿಕೆ ಮೊದಲಿನಿಂದಾನೂ ಇದೆ. ಈ ಸಂಬಂಧ ವರದಿ ತರಿಸಿಕೊಂಡು, ಅದನ್ನು ಸಂಪುರ್ಣವಾಗಿ ನೋಡಿದ ಬಳಿಕ ತೀರ್ಮಾನಿಸುತ್ತೇನೆ. ಹಳ್ಳಿಕಾರ್ ಸಮುದಾಯದ ಬಗ್ಗೆ‌ ಸೂಕ್ತ ತೀರ್ಮಾನವನ್ನೇ ತೆಗೆದುಕೊಳ್ಳುತ್ತೇನೆ. ಸಮಾಜದಲ್ಲಿರುವ ಹಲವು ಜಾತಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯಲು, ಜಾತಿ ಸಮೀಕ್ಷಾ ವರದಿಗಳು ಮುಖ್ಯ. ಆದರೆ ರಾಜ್ಯದಲ್ಲಿ 2011ರ ಜಾತಿಗಣತಿಯೇ ಕೊನೆಯ ಜಾತಿಗಣತಿಯಾಗಿದೆ.

Advertisement
Advertisement

ಈಗ ನಮ್ಮ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10ರಷ್ಟು ಮೀಸಲಾತಿ‌ ನೀಡಿದೆ. ಈ ವ್ಯಾಪ್ತಿಯೊಳಗೆ ಹಳ್ಳಿಕಾರ್ ಸಮುದಾಯ ಬರುತ್ತದೆಯಾ ಎಂಬುದನ್ನು ಪರಿಶೀಲಿಸಬೇಕು. ಈ ಸಮುದಾಯವನ್ನು ಪ್ರವರ್ಗ 3A ಗೆ ಸೇರಿಸುವುದು ಸೂಕ್ತವಲ್ಲ. ಹೀಗಾಗಿ ಶಾಶ್ವತ ಹಿಂದುಳಿದ‌ ಸಮುದಾಯಕ್ಕೆ ನಿಮ್ಮ ಬೇಡಿಕೆ ಕಳುಹಿಸಿ. ಅಧ್ಯಯನ ಮಾಡಿ ನಂತರ ವರದಿ ಪಡೆಯಲಾಗುವುದು. ನಂತರದ ದಿನಗಳಲ್ಲಿ ಸಮುದಾಯಕ್ಕೆ ಏನು ಸಿಗಬೇಕು ಎಂಬುದನ್ನು ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರ ಮಾತು ಕೇಳಿದ ಹಳ್ಳಿಕಾರ್ ಸಮುದಾಯಕ್ಕೆ ಖುಷಿ‌ ಸಿಕ್ಕಂತೆ ಆಗಿದೆ.

Tags :
Advertisement