For the best experience, open
https://m.suddione.com
on your mobile browser.
Advertisement

ಮೋದಿ ಬಗ್ಗೆ ಹೊಗಳಿದ್ದ ನಟಿ : ಹಿಗ್ಗಾಮುಗ್ಗಾ ಟ್ರೋಲ್ ಆದ ರಶ್ಮಿಕಾ ಮಂದಣ್ಣ..!

08:17 PM May 17, 2024 IST | suddionenews
ಮೋದಿ ಬಗ್ಗೆ ಹೊಗಳಿದ್ದ ನಟಿ   ಹಿಗ್ಗಾಮುಗ್ಗಾ ಟ್ರೋಲ್ ಆದ ರಶ್ಮಿಕಾ ಮಂದಣ್ಣ
Advertisement

ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹ್ಯಾಟ್ರಿಕ್ ಬಾರಿಸುವ ಕನಸು ಕಾಣುತ್ತಿದ್ದಾರೆ ಮೋದಿ. ಈ ಮಧ್ಯೆ ರಶ್ಮಿಕಾ ಮಂದಣ್ಣ ಮೋದಿಯವರ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಚರ್ಚೆಗೆ ಬಂದಿದ್ದು, ಪರ-ವಿರೋಧ ಕೇಳಿ ಬರುತ್ತಿದೆ. ರಶ್ಮಿಕಾ ಮಂದಣ್ಣ ಮಾತನಾಡಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ.

Advertisement

'ದಕ್ಷಿಣ ಭಾರತದಿಂದ ಉತ್ತರ ಭಾರತ.. ಪಶ್ಚಿಮ ಭಾರತದಿಂದ ಈಶಾನ್ಯ ಭಾರತ. ಜನರನ್ನು ಸಂಪರ್ಕಿಸುವುದು, ಹೃದಯಗಳನ್ನು ಸಂಪರ್ಕಿಸುವುದು ಎರಡು ಸುಲಭವಾಗಲಿ. ಜನರನ್ನು ಸಂಪರ್ಕಿಸುವುದಕ್ಕಿಂತ ಬೇರೆ ಯಾವುದು ತೃಪ್ರಿ ನೀಡಲ್ಲ' ಎಂದು ಅಟಲ್ ಸೇತು ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು‌ ಎಷ್ಟು ಕಡಿಮೆ ಸಮಯದಲ್ಲಿ ಜರ್ನಿ ಮಾಡಬಹುದು ಎಂಬುದನ್ನು ಹೇಳಿದ್ದರು. ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಾಕಷ್ಟು ಜನ ಕಮೆಂಟ್ ಹಾಕುತ್ತಿದ್ದಾರೆ. ಅದರ ಜೊತೆಗೆ ಟ್ರೋಲ್ ಕುಇಡ ಆಗುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಬಗ್ಗೆ ನೆಗೆಟಿವ್ ಕಮೆಂಟ್ ಗಳೇ ಕೇಳು ಬರುತ್ತಿವೆ. ನ್ಯಾಷನಲ್ ಕ್ರಶ್ ರಶ್ಮಿಕಾ ಇದೀಗ ನ್ಯಾಷನಲಿಸ್ಟ್ ಆದ್ರಾ ಎಂದು ಕಮೆಂಟ್ ಹಾಕುತ್ತಿದ್ದರೆ ಇನ್ನೊಂದಷ್ಟು ಮಂದಿ ರಶ್ಮಿಕಾ ಮಂದಣ್ಣ ಅವರನ್ನು ಕೇಳುತ್ತಿದ್ದಾರೆ. ಮೊದಲು ನೀವೂ ವೋಟ್ ಮಾಡಿದ್ರಾ ರಶ್ಮಿಕಾ ಅವರೇ ಎಂದಿದ್ದಾರೆ. ಇನ್ನೊಂದಷ್ಟು ಮಂದಿ ಕಂಗನಾಗೆ ಹೋಲಿಕೆ ಮಾಡುತ್ತಿದ್ದಾರೆ. ಓ ರಶ್ಮಿಕಾ ನಿಧಾನವಾಗಿ ಕಂಗನಾ ಆಗಿ ಬದಲಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement

ಹೀಗೆ ವಿಭಿನ್ನವಾದ ರೀತಿಯಲ್ಲಿ ಟ್ರೋಲ್ ಆಗುತ್ತಿದ್ದಾರೆ. ರಶ್ಮಿಕಾಗೆ ಟ್ರೋಲ್ ಎಂಬುದು ಹೊಸ ವಿಚಾರವೇನು ಅಲ್ಲ. ಸಣ್ಣ ಸಣ್ಣ ವಿಚಾರಕ್ಕೂ ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಇದೀಗ ಸಿನಿಮಾ ಬಿಟ್ಟು ರಾಜಕೀಯದ ವೇಳೆ ವಿಚಾರ ಮಾತನಾಡಿ ಟ್ರೋಲ್ ಆಗಿದ್ದಾರೆ.

Advertisement

Advertisement
Tags :
Advertisement