ಮದುವೆ ಬಗ್ಗೆ ಮೌನ ಮುರಿದ ನಟಿ ಸೋನಲ್ : ನಿರ್ದೇಶಕರ ಪೋಸ್ಟನ್ನೇ ಹಂಚಿಕೊಂಡ ನಟಿ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ತರುಣ್ ಸುಧೀರ್ ಮತ್ತು ಸೋನಲ್ ನಡುವಿನ ಮದುವೆ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ. ಇಬ್ಬರು ಕೂಡ ಅಧಿಕೃತವಾಗಿ ಹೌದು ಎಂದುಒಪ್ಪಿಕೊಂಡಿರಲೇ ಇಲ್ಲ. ತರುಣ್ ಅವರ ತಾಯಿ ಮಾಲತಿ ಅವರು ತನ್ನ ಮಗ ಸೋನಲ್ ಅವರನ್ನೇ ಮದುವೆಯಾಗುತ್ತಿರುವುದು ಸತ್ಯ ಎಂದೇ ಒಪ್ಪಿಕೊಂಡಿದ್ದರು. ಆದರೆ ನಟಿ-ನಿರ್ದೇಶಕ ಮಾತ್ರ ಹೇಳಿರಲಿಲ್ಲ.
ಅದರಲ್ಲೂ ಮದುವೆ ವಿಚಾರವನ್ನು ತುಂಬಾ ವಿಶೇಷವಾಗಿ ಹೇಳಬೇಕು ಎಂಬುದು ತರುಣ್ ಸುಧೀರ್ ಅವರ ಅಭಿಲಾಷೆಯಾಗಿತ್ತು. ಇದೀಗ ಅದಕ್ಕೂ ದಿನಾಂಕ ನಿಗಧಿ ಮಾಡಿದ್ದಾರೆ. ನಾಳೆ ಪ್ರೆಸ್ ಮೀಟ್ ಕರೆದಿದ್ದು, ಮದುವೆ, ಲವ್ ವಿಚಾರವನ್ನು ತಿಳಿಸಲಿದ್ದಾರೆ. ಅದಕ್ಕೂ ಮುನ್ನ ಸೋನಲ್ ಹಾಗೂ ತರುಣ್ ಒಂದೇ ಪೋಸ್ಟನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಡೈರೆಕ್ಟರ್ ಮತ್ತು ನಟಿ ಅಂತ ಚೇರ್ ಮೇಲೆ ಬರೆದಿರುವ ಫೋಟೋವದು. ಸುತ್ತಲು ಸಿನಿಮಾದ ಎಕ್ಯುಪ್ ಮೆಂಟ್ ಗಳೇ ಇದಾವೆ. ಸೋನಲ್ ಈ ಪೋಸ್ಟ್ ಅನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನಟಿಯ ಜೀವನಕ್ಕೆ ನಿರ್ದೇಶಕ ಬಂದಾಯ್ತು ಅಂತ ಬರೆದುಕೊಂಡಿದ್ದರೆ, ತರುಣ್ ಸುಧೀರ್, ನಿರ್ದೇಶಕನ ಜೀವನಕ್ಕೆ ನಟಿ ಸಿಕ್ಕಾಯ್ತು ಎಂದು ಬರೆದುಕೊಂಡಿದ್ದಾರೆ.
ಇನ್ನು ತರುಣ್ ಸುಧೀರ್ ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ, ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ನನ್ನ ಮದುವೆ ಸಮಯಕ್ಕೆ ಖಂಡಿತ ದರ್ಶನ್ ಅವರು ಬಂದೇ ಬರ್ತಾರೆ ಎಂಬ ಭರವಸೆಯ ಮಾತನ್ನು ಆಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲಲ್ಲಿರುವ ದರ್ಶನ್ ವಕೀಲರು, ಇನ್ನು ಜಾಮೀನಿಗೂ ಅರ್ಜಿ ಸಲ್ಲಿಸಿಲ್ಲ.