ನಟಿ ಶೋಭಿತಾ ಶಿವಣ್ಣ ಸಾವು : ಪ್ರೀತಿಸಿಮದುವೆಯಾಗಿದ್ದ ನಟಿಗೆ ಏನಾಯ್ತು..?
ಬ್ರಹ್ಮಗಂಟು ಸೀರಿಯಲ್ ಮೂಲಕ ಖ್ಯಾತಿ ಪಡೆದಿದ್ದ ನಟಿ ಶೋಭಿತಾ ಶಿವಣ್ಣ ಹೈದ್ರಾಬಾದ್ ನಲ್ಲಿ ಸಾವನ್ನಪ್ಪಿದ್ದಾರೆ. ಮದುವೆಯಾದ ಬಳಿಕ ಶೋಭಿತಾ ನಟನೆಯಿಂದ ದೂರಾಗಿ ಹೈದ್ರಾಬಾದ್ ನಲ್ಲಿಯೇ ವಾಸವಾಗಿದ್ದರು. ಮಧ್ಯರಾತ್ರಿಯೇ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು, ಕುಟುಂಬಸ್ಥರು ಹೈದ್ರಾಬಾದ್ ಗೆ ತೆರಳಿದ್ದಾರೆ.
ನಟಿ ಶೋಭಿತಾ 2023ರ ಮೇ ತಿಂಗಳಲ್ಲಿ ಮದುವೆಯಾಗಿದ್ದರು. ಹುಡುಗ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಆದರೆ ಮದುವೆಗೆ ಬ್ರಹ್ಮಗಂಟು ಧಾರಾವಾಹಿ ತಂಡದ ಕಲಾವಿದರು ಹೋಗಿದ್ದರು. ಹಾರೈಸಿ ಬಂದಿದ್ದರು. ಆಗ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳು ವೈರಲ್ ಆಗಿದ್ದವು. ಆದರೆ ನಟಿ ಇದ್ದಕ್ಕಿದ್ದ ಹಾಗೇ ಪ್ರಾಣ ಕಳೆದುಕೊಂಡಿರುವುದು ಸೀರಿಯಲ್ ನಲ್ಲಿ ಒಟ್ಟಿಗೆ ಅಭಿನಯಿಸಿದ ಕಲಾವಿದರಿಗೂ ಶಾಕ್ ಆಗಿದೆ. ಶೋಭಿತಾ ಲೈಫ್ ನಲ್ಲಿ ಏನಾಗಿತ್ತು..? ಹೇಗೆ ಸಾವನ್ನಪ್ಪಿದರು ಎಂಬ ವಿವರವೆಲ್ಲ ಇನ್ನಷ್ಟೇ ಹೊರಗೆ ಬರಬೇಕಿದೆ.
ಶೋಭಿತಾ ಬ್ರಹ್ಮಗಂಟು ಸೀರಿಯಲ್ ನಲ್ಲಿ ವಿಲನ್ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಆ ಮೂಲಕವೇ ಫೇಮಸ್ ಆಗಿದ್ದರು. ಬ್ರಹ್ಮಗಂಟು, ನಿನ್ನಿಂದಲೇ ಧಾರಾವಾಹಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿದ್ದರು. ಆದರೆ ಈಗ ದುರಂತ್ಯ ಅಂತ್ಯ ಕಂಡಿದ್ದಾರೆ. ಈ ಸುದ್ದಿ ಕೇಳಿ, ಶೋಭಿತಾ ಮನೆಯವರು ಕೂಡ ನಿಜಕ್ಕೂ ಶಾಕ್ ಆಗಿದ್ದಾರೆ. ಈಗ ಹೈದ್ರಾಬಾದ್ ಗೆ ಹೋಗಿದ್ದು, ಮಗಳಿಗೆ ಏನಾಯ್ತು ಎಂಬುದನ್ನು ತಿಳಿಯಲಿದ್ದಾರೆ. ಆದರೆ ಕಿರುತೆರೆ ನಟಿಯರಿಗಂತು ಈ ಸುದ್ದಿ ಆಘಾತಕಾರಿಯಾಗಿದೆ. ಬ್ರಹ್ಮಗಂಟು ಧಾರಾವಾಹಿಯಲ್ಲಿ ಗುಂಡಮ್ಮನಿಗೆ ತಂಗಿಯಾಗಿ ಮಾಡಿದ್ದರು. ಕಿತಾಪತಿ ಮಾಡುವ ಸೊಸೆಯಾಗಿದ್ದರು. ವಿಲನ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ಜೀವನವನ್ನೇ ಕೊನೆ ಮಾಡಿಕೊಂಡಿರುವುದು ಮಾತ್ರ ದುರಂತವೇ ಸರಿ.