ನಟ ದರ್ಶನ್ ಗೆ ಗೃಹ ಇಲಾಖೆಯಿಂದ ಶಾಕ್ : ಸಿಕ್ಕ ಜಾಮೀನು ಕ್ಯಾನ್ಸಲ್ ಆಗುತ್ತಾ..?
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಬೆನ್ನು ನೋವಿನ ಸಮಸ್ಯೆಯಿಂದ ಮಧ್ಯಂತರ ಜಾಮೀನು ಪಡೆದಿದ್ದಾರೆ. ಸದ್ಯ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಆರು ವಾರಗಳ ಕಾಲ ಚಿಕಿತ್ಸೆಗೆಂದು ಸಮಯ ನೀಡಲಾಗಿದೆ. ಆದರೆ ಈ ಜಾಮೀನು ಪ್ರಶ್ನಿಸಿ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಹೋಗಲು ನಿರ್ಧಿರಿಸಿದೆ. ಇದಕ್ಕೆ ಗೃಹ ಸಚಿವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ನಟ ದರ್ಶನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವುದಾದರೆ ಹೋಗಿ ಎಂದು ಹೇಳಿದ್ದೇನೆ. ಮೇಲ್ಮನವಿ ಸಲ್ಲಿಸಲು ವಿಳಂಬ ಆಗಿಲ್ಲ. ಯಾವಾಗ ತೀರ್ಮಾನ ಮಾಡಬೇಕು ಎಂಬುದರ ಬಗ್ಗೆ ಗೃಹ ಇಲಾಖೆಯ ಕಾರ್ಯದರ್ಶಿಗಳು ತೀರ್ಮಾನ ಕೈಗೊಳ್ಳುತ್ತಾರೆ. ನಾನು ಕೂಡ ಮೇಲ್ಮನವಿಗೆ ಹೋಗುವುದಾದರೆ ಹೋಗಿ ಎಂದು ಹೇಳಿದ್ದೇನೆ. ಪ್ರಕ್ರಿಯೆಗಳನ್ನು ಅನುಸರಿಸಿಯೇ ಇಂಥಹ ಕೇಸುಗಳಲ್ಲಿ ಮುಂದುವರೆಯಬೇಕು. ಕಾನೂನು ಇಲಾಖೆಯಿಂದ ಮಾಹಿತಿ ಪಡೆದ ಬಳಿಕ ಗೃಹ ಇಲಾಖೆ ಈ ಸಂಬಂಧ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಇನ್ನು ದರ್ಶನ್ ಅವರು ಆರೋಗ್ಯದ ಸಮಸ್ಯೆಯಿಂದ ಜಾಮೀನು ಪಡೆದಿದ್ದು, ಡಿಸೆಂಬರ್ 11ಕ್ಕೆ ಜಾಮೀನು ಅವಧಿ ಮುಕ್ತಾಯವಾಗುತ್ತದೆ. ಅಷ್ಟರೊಳಗೆ ಟ್ರೀಟ್ಮೆಂಟ್ ಪಡೆದಿರಬೇಕು. ಇನ್ನು ಎರಡು ವಾರವಷ್ಟೇ ಅವರಿಗೆ ಕಾಲಾವಕಾಶವಿದೆ. ಇದರ ನಡುವೆ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಹೋಗುವುದಕ್ಕೆ ತಯಾರಿ ನಡೆಸುತ್ತಿದೆ. ಅತ್ತ ಪವಿತ್ರಾ ಗೌಡ ಕೂಡ ಜಾಮೀನು ಪಡೆಯಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ. ಅವರ ಜಾಮೀನು ಅರ್ಜಿಯು ನವೆಂಬರ್ 21 ಕ್ಕೆ ಮುಂದೂಡಿಕೆಯಾಗಿದೆ.