For the best experience, open
https://m.suddione.com
on your mobile browser.
Advertisement

ರಾಮಮಂದಿರ ಉದ್ಘಾಟನೆ ದಿನವೇ ಮಕ್ಕಳಿಗೆ ಹೆಸರಿಡಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

11:55 AM Jan 11, 2024 IST | suddionenews
ರಾಮಮಂದಿರ ಉದ್ಘಾಟನೆ ದಿನವೇ ಮಕ್ಕಳಿಗೆ ಹೆಸರಿಡಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
Advertisement

Advertisement
Advertisement

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಈ ದಿನಕ್ಕೋಸ್ಕರ  ಕೋಟ್ಯಾಂತರ ಜನರು ಕಾಯುತ್ತಿದ್ದಾರೆ. ಎಷ್ಟೋ ಗರ್ಭಿಣಿಯರು ಅಂದೇ ಹೆರಿಗೆ ಮಾಡಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಇದರ ಬೆನ್ನಲ್ಲೇ ಸ್ಯಾಂಡಲ್ ವುಡ್ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಕೂಡ ತಮ್ಮ ಮಕ್ಕಳಿಗೆ ಅಂದೇ ನಾಮಕರಣ ಮಾಡಲು ನಿರ್ಧರಿಸಿದ್ದಾರೆ.

ಧ್ರುವ ಮತ್ತು ಪ್ರೇರಣಾ ದಂಪತಿಗೆ ಇಬ್ಬರು ಮಕ್ಕಳು ಒಂದು ಹೆಣ್ಣು, ಒಂದು ಗಂಡು. ಎರಡು ಮಕ್ಕಳಿಗೆ ಇನ್ನು ಹೆಸರಿಟ್ಟಿಲ್ಲ. ಆದರೆ ಈಗ ಒಂದು ವಿಶೇಷ ದಿನವನ್ನು ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅದುವೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ದಿನ. ಎರಡು ಮಕ್ಕಳಿಗೆ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳ ಹೆಸರನ್ನು ಇಡಲು ನಿರ್ಧಾರ ಮಾಡಲಾಗಿದೆಯಂತೆ.

Advertisement
Advertisement

ಧ್ರುವ ಸರ್ಜಾ ಸದ್ಯ ಎರಡು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೆಡಿ ಹಾಗೂ ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಜನತೆ ಈ ಎರಡು ಸಿನಿಮಾಗಾಗಿ ಕಾಯುತ್ತಾ ಇದ್ದಾರೆ.

Advertisement
Tags :
Advertisement