Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಂಗಳೂರು ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ : ಆರೋಪಿ ಅರೆಸ್ಟ್

05:40 PM Mar 04, 2024 IST | suddionenews
Advertisement

ಮಂಗಳೂರು: ಮೂವರು ಕಾಲೇಜು ವಿಧ್ಯಾರ್ಥಿಗಳ ಮೇಲರ ಆ್ಯಸಿಡ್ ದಾಳಿ ನಡೆದಿರುವ ಘಟನೆ ಮಂಗಳೂರಿನ ಕಡಬದಲ್ಲಿ ನಡೆದಿದೆ‌. ಮುಖ ಮುಚ್ಚಿಕೊಂಡು ಬಂದಾತ ಮೂವರು ವಿದ್ಯಾರ್ಥಿಗಳಿಗೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Advertisement

ಕಡಬ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು ಎಂಬುದು ತಿಳಿದು ಬಂದಿದೆ. ಕಾಲೇಜಿಗೆ ತೆರಳುತ್ತಿದ್ದಂತ ಅಲೀನಾ, ಅರ್ಚನಾ, ಅಮೃತಾ ಅವರ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆ್ಯಸಿಡ್ ದಾಳಿ ಮಾಡಿದವ ಕೇರಳ ಮೂಲದವನು ಎಂಬುದಾಗಿ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದೆ. ಅಬೀನ್ ಎಂದು ಹೇಳಲಾಗಿದ್ದು, ಮುಖಕ್ಕೆ‌ ಮಾಸ್ಕ್ ಹಾಕಿಕೊಂಡು ಬಂದು ದಾಳಿ ನಡೆಸಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ಕೃತ್ಯ ಮಾಡುವುದಕ್ಕೆ ಕಾರಣ ಏನು ಎಂಬುದು ಮಾತ್ರ ಇನ್ನು ತಿಳಿದು ಬಂದಿಲ್ಲ.

Advertisement

Advertisement
Tags :
Accused arrestedAcid AttackMangaloreMangalore Collegethree female studentsಆರೋಪಿ ಅರೆಸ್ಟ್ಆ್ಯಸಿಡ್ ದಾಳಿಮಂಗಳೂರುಮೂವರು ವಿದ್ಯಾರ್ಥಿ
Advertisement
Next Article