Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರಚೋದನಕಾರಿ ಭಾಷಣ ಮಾಡಿದ ಆರೋಪ : ಈಶ್ವರಪ್ಪ ಮೇಲೆ ಸುಮೋಟೋ ಕೇಸ್

01:06 PM Oct 13, 2023 IST | suddionenews
Advertisement

 

Advertisement

ಶಿವಮೊಗ್ಗ: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಕೇಸ್ ದಾಖಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರಿಂದಾನೇ ಕೇಸ್ ದಾಖಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯ ವಿರುದ್ಧ ನಿನ್ನೆ ನಡೆದ ಪ್ರತಿಭಟನಾ ಸಭೆಯಲ್ಲಿ ಆಡಿದ ಮಾತಿಗೆ ಕೇಸ್ ದಾಖಲಾಗಿದೆ. 'ಹಿಂದೂ ಕಾರ್ಯಕರ್ತ ಹರ್ಷನ ಕೊಲೆಯ ಬಳಿಕ, ಹಿಂದೂಗಳು ಮುಸ್ಲಿಮರನ್ನು ಮಾರಿಹಬ್ಬದಲ್ಲಿ ಕುರಿಗಳನ್ನು ಕೊಚ್ಚಿದ ಹಾಗೆ ಕೊಚ್ಚಬಹುದಿತ್ತು. ಆದರೆ ಹಿಂದೂ ಸಮಾಜ ಆ ರೀತಿ ಪ್ರತಿಕ್ರಿಯಿಸದೆ ಶಾಂತ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ಈಶ್ವರಪ್ಪ ಭಾಷಣದಲ್ಲಿ ಹೇಳಿದ್ದರು.

Advertisement

ಅಲ್ಲದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೆಸರನ್ನು ತಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಮಗನನ್ನು, ಡಿಕೆ ಶಿವಕುಮಾರ್ ಅವರ ಸಹೋದರನನ್ನು ಮುಸ್ಲಿಂ ಗೂಂಡಾಗಳು ಕೊಚ್ಚಿ ಹಾಕಿದ್ದರೆ ಏನು ಅನ್ನಿಸ್ತಾ ಇತ್ತು ಎಂದು ಭಾಷಣ ಮಾಡಿದ್ದಾರೆ.. ಈ ಭಾಷಣ ಪ್ರಚೋದನಕಾರಿಯಾಗಿದ್ದರಿಂದ ಜಯನಗರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ.

Advertisement
Tags :
AccusedbengaluruEx-minister KS Eshwarappafeaturedprovocative speechShivamoggasuddioneSumoto caseಆರೋಪಕೆ ಎಸ್ ಈಶ್ವರಪ್ಪಪ್ರಚೋದನಕಾರಿ ಭಾಷಣಬೆಂಗಳೂರುಶಿವಮೊಗ್ಗಸುದ್ದಿಒನ್ಸುಮೋಟೋ
Advertisement
Next Article