For the best experience, open
https://m.suddione.com
on your mobile browser.
Advertisement

ಆ ದೇವಸ್ಥಾನದಲ್ಲಿ ವಿಚಿತ್ರ ಪದ್ಧತಿ :  ಗರ್ಭಗುಡಿಯಲ್ಲಿ ದೇವರಿಗೆ ಮಂಚ್ ಚಾಕಲೇಟ್ ನೈವೇದ್ಯ :  ಕಾರಣ ಏನು ಗೊತ್ತಾ ? 

08:22 AM Jul 13, 2024 IST | suddionenews
ಆ ದೇವಸ್ಥಾನದಲ್ಲಿ ವಿಚಿತ್ರ ಪದ್ಧತಿ    ಗರ್ಭಗುಡಿಯಲ್ಲಿ ದೇವರಿಗೆ ಮಂಚ್ ಚಾಕಲೇಟ್ ನೈವೇದ್ಯ    ಕಾರಣ ಏನು ಗೊತ್ತಾ   
Advertisement

ಸುದ್ದಿಒನ್ : ಎಲ್ಲಾ ಹಿಂದೂ ದೇವಾಲಯಗಳಲ್ಲಿ ವಿವಿಧ ರೀತಿಯ ಹಣ್ಣುಗಳು, ಹೂವುಗಳು ಮತ್ತು ವಿವಿಧ ರೀತಿಯ ಆಹಾರವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಉದಾಹರಣೆಗೆ, ಅಯ್ಯಪ್ಪ ಸ್ವಾಮಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ ಮತ್ತು ಗಣೇಶನಿಗೆ ಮೋದಕ ಅಥವಾ ಲಡ್ಡು, ನೈವೇದ್ಯವಾಗಿ  ಅರ್ಪಿಸುವುದು ನಮಗೆಲ್ಲಾ ತಿಳಿದಿದೆ. ಅಲ್ಲದೆ ಕೆಲವು ದೇವಸ್ಥಾನಗಳಲ್ಲಿ ದೇವರಿಗೆ ಪಾಯಸ, ಪೊಂಗಲ್, ಪುಳಿಯೋಗರೆ, ಮೊಸರನ್ನ ಹೀಗೆ ನಾನಾ ಬಗೆಯ ಆಹಾರ ಪದಾರ್ಥಗಳನ್ನು ಅರ್ಪಿಸುತ್ತಾರೆ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯವಾಗಿ ಮಂಚ್ ಚಾಕಲೇಟನ್ನು ಅರ್ಪಿಸಲಾಗುತ್ತದೆ. ಕೇರಳದ ಅಪರೂಪದ ದೇವಸ್ಥಾನವೊಂದರಲ್ಲಿ ಈ ವಿಚಿತ್ರ ಆಚರಣೆ ನಡೆಯುತ್ತಿದೆ. ಇದರ ಹಿಂದಿನ ಕಥೆ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

Advertisement

ಕೇರಳದ ಮಂಚ್ ಮುರುಗನ್ ದೇವಸ್ಥಾನದಲ್ಲಿ, ಮಂಚ್ ಚಾಕೊಲೇಟ್ ಅನ್ನು ದೇವತೆಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಅಷ್ಟೇ ಅಲ್ಲ, ಈ ದೇವಸ್ಥಾನದಲ್ಲಿ ವಿಶೇಷ ಸಂದರ್ಭಗಳಲ್ಲಿ ಮಂಚ್ ಚಾಕೊಲೇಟ್ ಅನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಕಳೆದ ಆರು ವರ್ಷಗಳಿಂದ ಈ ಪದ್ಧತಿಯನ್ನು ಆರಂಭಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಒಮ್ಮೆ ಒಬ್ಬ ಹುಡುಗ ದೇವಸ್ಥಾನದಲ್ಲಿ ಆಟವಾಡುತ್ತಿದ್ದಾಗ ಆ ದೇವಾಲಯದಲ್ಲಿದ್ದ ಗಂಟೆಯನ್ನು ಬಾರಿಸಿದನು. ಹಾಗೆ ಮಾಡಿದ್ದಕ್ಕೆ ಆತನ ಪೋಷಕರು ಗದರಿಸಿದ್ದರು. ಆ ರಾತ್ರಿ ಹುಡುಗನಿಗೆ ವಿಪರೀತ ಜ್ವರ ಬಂತು. ಆ ಹುಡುಗ ರಾತ್ರಿಯಿಡೀ ಮುರುಗನ ನಾಮಜಪ ಮಾಡುತ್ತಿದ್ದ. ಆದ್ದರಿಂದ ಮರುದಿನ ಅವನ ಪೋಷಕರು ಹುಡುಗನನ್ನು ದೇವಸ್ಥಾನಕ್ಕೆ ಕರೆತಂದರು.

Advertisement

ಈ ಸಂದರ್ಭದಲ್ಲಿ ಅರ್ಚಕರು ಬಾಲಕನ ಪೋಷಕರಿಗೆ ದೇವರಿಗೆ ಏನಾದರೂ ಅರ್ಪಿಸುವಂತೆ ಸೂಚಿಸಿದರು. ಪೋಷಕರು ಭಕ್ತಿಯಿಂದ ದೇವರಿಗೆ ಹೂವು, ಹಣ್ಣುಗಳನ್ನು ಅರ್ಪಿಸಿದರೆ, ಬಾಲಕನು ಗರ್ಭಗುಡಿಯಲ್ಲಿದ್ದ ದೇವರಿಗೆ ಮಂಚ್ ಚಾಕಲೇಟ್ ಅರ್ಪಿಸಿದನು. ಅಂದಿನಿಂದ ಕೆಲವೇ ದಿನಗಳಲ್ಲಿ ಆ ಹುಡುಗ ಅದ್ಭುತವಾಗಿ ಚೇತರಿಸಿಕೊಂಡ. ಆ ಬಳಿಕ ದೇವಸ್ಥಾನದಲ್ಲಿ ಮಂಚ್ ಚಾಕಲೇಟ್ ನೈವೇದ್ಯ ಮಾಡಿ ಪ್ರಸಾದ ವಿತರಿಸುವ ಸಂಪ್ರದಾಯ ಮುಂದುವರಿದಿದೆ ಎನ್ನಲಾಗಿದೆ.

ಈ ಸುದ್ದಿ ಗಾಳಿಯಂತೆ ಇಡೀ ಊರಿಗೆ ಹರಡುತ್ತದೆ. ಈ ಘಟನೆಯ ನಂತರ ಈ ದೇವರಿಗೆ ಮಂಚ್ ಮುರುಗನ್ ಎಂದು ಕರೆಯಲು ಆರಂಭಿಸುತ್ತಾರೆ. ಒಟ್ಟಾರೆಯಾಗಿ 300 ವರ್ಷಗಳಷ್ಟು ಹಳೆಯದಾದ ಮುರುಗನ್ ದೇವರ ಆಶೀರ್ವಾದವನ್ನು ಪಡೆಯಲು ಜಾತಿ, ಮತ ಮತ್ತು ಧರ್ಮದ ಭೇದವಿಲ್ಲದೆ ಜನರು ಚಾಕೊಲೇಟ್ಗಳ ಬಾಕ್ಸ್ ಹಿಡಿದು ದೇಗುಲಕ್ಕೆ ಬರುತ್ತಾರೆ ಎಂಬುದು ವಿಶೇಷ.

Tags :
Advertisement