ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಮಾಡಿದ ಆರೋಪಿ ಹುಡುಕಿ ಕೊಟ್ಟವರಿಗೆ 10 ಲಕ್ಷ ಬಹುಮಾನ ಘೋಷಣೆ..!
ಬೆಂಗಳೂರು: ಇಂದಿರಾನಗರದಲ್ಲಿರುವ ರಾಮೇಶ್ವರಂ ಸ್ಪೋಟ ಪ್ರಕರಣ ನಡೆದು ಆರು ದಿನಗಳು ಕಳೆದಿವೆ. ಆದರೂ ಆರೋಪಿ ಮಾತ್ರ ಪೊಲೀಸರಿಗೆ ಸಿಕ್ಕಿಲ್ಲ. ಸಖತ್ ಪ್ಲ್ಯಾನ್ ಮಾಡಿಕೊಂಡೆ ಆತ ಬಾಂಬ್ ಬ್ಲಾಸ್ಟ್ ಮಾಡಿದ್ದಾನೆ. ಎಲ್ಲಿಯೂ ತನ್ನ ಕುರುಹು ಕೂಡ ಸಿಗದಂತೆ ಮಾಡಿದ್ದಾನೆ. ಕಳೆದ ಐದು ದಿನಗಳಿಂದ ಕರ್‌ಅಟಕ ಪೊಲೀಸರು ಬೆಂಬಿಡದೆ ಹುಡುಕುತ್ತಿದ್ದಾರೆ. ಆದರೂ ಸುಳಿವು ಸಿಗುತ್ತಿಲ್ಲ. ಈ ಕೇಸನ್ನು ಎನ್ಐಎ ತಂಡ ಕೈಗೆತ್ತಿಕೊಂಡಿದ್ದು, ಇದೀಗ ಆರೋಪಿಯ ಹುಡುಕಾಟಕ್ಕೆ ಹೊಸ ದಾರಿ ಹುಡುಕಿದೆ.
ಶಂಕಿತ ಓಡಾಡಿದ ಸಿಸಿಟಿವಿ ವಿಡಿಯೋ ಅದಾಗಲೇ ರಿಲೀಸ್ ಆಗಿತ್ತು. ಬಾಂಬ್ ಇಟ್ಟವ ಎಲ್ಲಿಯೂ ತನ್ನ ಮುಖ ಕಾಣದಂತೆ ಕವರ್ ಮಾಡಿಕೊಂಡಿದ್ದ. ಹೀಗಾಗಿ ಈಗ ರಾಷ್ಟ್ರೀಯ ತನಿಖಾ ಸಂಸ್ಥೆ ಆತನ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದೆ. ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಘೋಷಣೆ ಮಾಡಿದೆ. ಆರೋಪಿಯ ಸುಳಿವು ಕೊಟ್ಟವರಿಗೆ ಹತ್ತು ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದು, ಆತನ ಸುಳಿವು ಸಿಕ್ಕಲ್ಲಿ 080-29510900 ಮತ್ತು 8904241100 ನಂಬರಿಗೆ ಮಾಹಿತಿ ನೀಡಲು ಸೂಚನೆ ನೀಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಮೇಶ್ವರಂ ಕೆಫೆಯಲ್ಲಿ ಯಾವಾಗಲೂ ಸಿಕ್ಕಾಪಟ್ಟೆ ಜನ ಇರುತ್ತಾರೆ. ಅಲ್ಲಿನ ತಿಂಡಿ, ಊಟಕ್ಕೆ ಜನ ಮನಸೋತಿದ್ದಾರೆ. ಹೀಗಾಗಿ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಜನ ಹೆಚ್ಚಾಗಿರುವ ಜಾಗವನ್ನೇ ನೋಡಿ ಬ್ಲಾಸ್ಟ್ ಮಾಡಲಾಗಿದೆ. ಹೊಟೇಲ್ ಬೆಳೆದ ರೀತಿಗೆ, ಆ ಯಶಸ್ಸಿಗೆ ಯಾರಾದರೂ ಈ ರೀತಿ ಮಾಡಿದರಾ, ಅಥವಾ ಜನರು ಹೆಚ್ಚಾಗಿದ್ದ ಕಾರಣ ಬ್ಲಾಸ್ಟ್ ಮಾಡಿದರಾ ಯಾವ ಮಾಹಿತಿಯೂ ಇನ್ನು ಪಕ್ಕಾ ಆಗಿಲ್ಲ. ಆರೋಪಿ ಸಿಕ್ಕ ಬಳಿಕವಷ್ಟೇ ಇದಕ್ಕೆಲ್ಲಾ ಒಂದು ಅಂತ್ಯ ಸಿಗಲಿದೆ.