Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಿಗ್ ಬಾಸ್ ಗೆ ಕಿಚ್ಚ ಗುಡ್ ಬೈ : ಇದೇ ಕಡೆಯ ಸೀಸನ್ ಎಂದಿದ್ದೇಕೆ..?

11:00 AM Oct 14, 2024 IST | suddionenews
Advertisement

 

Advertisement

 

ಬಿಗ್ ಬಾಸ್ ಕನ್ನಡ ಶೋ ಅಂದ್ರೆನೇ ಥಟ್ ಅಂತ ನೆನಪಾಗುವುದು ಸುದೀಪ್. ಕಳೆದ ಹತ್ತು ವರ್ಷದಿಂದ ಬಿಗ್ ಬಾಸ್ ಜರ್ನಿಯಲ್ಲಿ ಮುಂದುವರೆದಿದ್ದಾರೆ. ಬಿಗ್ ಬಾಸ್ ನಲ್ಲಿ ವಾರದ ಕಥೆ ಕಿಚ್ಚನ ಜೊತೆಗೆ ಪಂಚಾಯ್ತಿ ಕೇಳುವುದಕ್ಕೇನೆ ಚೆಂದ. ಅದೆಷ್ಟೋ ಅಭಿಮಾನಿಗಳು ಅವರ ಪಂಚಾಯ್ತಿಗಾಗಿ ಕಾಯುತ್ತಿರುತ್ತಾರೆ. ಕೆಲವೊಂದು ವಾರ ಅವರು ಬಾರದೆ ಇದ್ದಾಗ ಬಿಗ್ ಬಾಸ್ ಅಷ್ಟಾಗಿ ಖುಷಿ ಕೊಡೋದೆ ಇಲ್ಲ. ಬಿಗ್ ಬಾಸ್ ಮನೆಯೂ ಬಿಕೋ ಎನ್ನುತ್ತದೆ.

Advertisement

ಸುದೀಪ್ ಅವರದ್ದೇ ಆದ ಒಂದು ಸ್ಟೈಲ್ ಇದೆ‌. ಆ ಗತ್ತು, ಗಾಂಭೀರ್ಯ ಅವರಿಗೆ ಮಾತ್ರ ಬರೋದು. ಪಂಚಾಯ್ತಿ ಕಟ್ಟೆಯಲ್ಲಿ ಅಷ್ಟು ಜನರ ತಪ್ಪನ್ನು ಅರ್ಥ ಮಾಡಿಸುವುದು, ನೋವಾಗದಂತೆ ನೋಡಿಕೊಳ್ಳುವುದು, ಕಾಲೆಳೆಯುವುದು ಅಷ್ಟು ಸುಲಭಕ್ಕೆ, ಇಷ್ಟು ಪರ್ಫೆಕ್ಟ್ ಆಗಿ ಯಾರಿಗೂ ಬರಲು ಸಾಧ್ಯವಿಲ್ಲ. ಬಾದ್ ಷಾ ಸಮಾಜದ ನಡುವೆ ಇರುವುದು ಹಾಗೇ. ಆದರೆ ಇನ್ಮುಂದೆ ನಾವೂ ಕಿಚ್ಚನ ಬಿಗ್ ಬಾಸ್ ಮಿಸ್ ಮಾಡಿಕೊಳ್ಳೋದು ಪಕ್ಕಾ.

 

ಬಿಗ್ ಬಾಸ್ ಸೀಸನ್ 11 ಶುರುವಾಗಿ ಇಂದಿಗೆ ಮೂರು ವಾರ ಕಳೆದಿದೆ. ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಬಿಗ್ ಬಾಸ್ ಮಂದಿ ನಕ್ಕು ನಲಿದಿದ್ದಾರೆ‌. ಒಂದಷ್ಟು ಗೇಮ್ ಗಳನ್ನು ಕಿಚ್ಚ ಸುದೀಪ್ ಆಡಿಸೊ, ಅವರವರ ಬಗ್ಗೆಯೇ ಅರ್ಥ ಮಾಡಿಕೊಳ್ಳುವಂತೆ ಮಾಡಿದ್ದರು. ಕಿಚ್ಚನ ಪಂಚಾಯ್ತಿ ಅಂದ್ರೆ ವೀಕ್ಷಕರಿಗೆ ಮಾತ್ರವಲ್ಲ, ಸ್ಪರ್ಧಿಗಳಿಗೂ ಖುಷಿಯೋ ಖುಷಿ.

 

ಮೂರು ವಾರವಷ್ಟೇ ಕಳೆದಿದೆ. ಆದರೆ ಕಿಚ್ಚ ಸುದೀಪ್ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಗ್ ಬಾಸ್ ಕೊನೆಯ ಶೋ ಎಂದು ಟ್ವೀಟ್ ಮಾಡಿದ್ದಾರೆ. 'BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ಟಿವಿಆರ್ (ಸಂಖ್ಯೆ) ಕಾರ್ಯಕ್ರಮ ಮತ್ತು ನನ್ನ ಬಗ್ಗೆ ನೀವೆಲ್ಲರೂ ತೋರಿದ ಪ್ರೀತಿಯ ಬಗ್ಗೆ ಸಂಪುಟಗಳಲ್ಲಿ ಹೇಳುತ್ತದೆ. ಇದು ಉತ್ತಮ 10 1 ವರ್ಷಗಳ ಒಟ್ಟಿಗೆ ಪ್ರಯಾಣವಾಗಿದೆ, ಮತ್ತು ನಾನು ಏನು ಮಾಡಬೇಕೆಂಬುದನ್ನು ಮುಂದುವರಿಸಲು ಇದು ಸಮಯವಾಗಿದೆ. ಇದು BBK ಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ನಿರ್ಧಾರವನ್ನು ನನ್ನ ಬಣ್ಣಗಳು ಮತ್ತು ಈ ಎಲ್ಲಾ ವರ್ಷಗಳಿಂದ BB ​​ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ನನ್ನ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಲವ್ ಮತ್ತು ಅಪ್ಪುಗೆಗಳು' ಎಂದು ಟ್ವೀಟ್ ಮಾಡಿದ್ದಾರೆ.

ಬಿಗ್ ಬಾಸ್ ಸೀಸನ್ 11 ಶುರುವಾಗುವುದಕ್ಕೂ ಮುನ್ನವೇ ಕಿಚ್ಚ ಸುದೀಪ್ ಈ ಬಾರಿ ಬಿಗ್ ಬಾಸ್ ಹೋಸ್ಟ್ ಮಾಡಲ್ಲ, ಹೊಸ ಆಂಕರ್ ಬರ್ತಾರೆ ಎಂದೇ ಸುದ್ದಿಯಾಗಿತ್ತು. ಆದರೆ ಸುದೀಪ್ ಅವರನ್ನು ಕಲರ್ಸ್ ಕನ್ನಡ ಬಿಗ್ ಬಾಸ್ ಟೀಂ ಮನವಿ ಮಾಡಿತ್ತು. ಈಗ ಸುದೀಪ್ ಅವರ ಟ್ವೀಟ್ ನೋಡ್ತಾ ಇದ್ರೆ ಈ ಒಂದು ಸೀಸನ್ ಮುಗಿಸಿಕೊಡಿ, ಮುಂದೆ ನೋಡೋಣಾ ಎಂಬ ಮಾತನ್ನ ಟೀಂ ಹೇಳಿದ್ಯಾ ಎಂಬ ಅನುಮಾನ ಮೂಡಿದೆ.

Advertisement
Tags :
bengalurubigg bosschitradurgaGOODBYEkicha sudeepsuddionesuddione newsಕಿಚ್ಚ ಸುದೀಪ್ಗುಡ್ ಬೈಚಿತ್ರದುರ್ಗಬಿಗ್ ಬಾಸ್ಬೆಂಗಳೂರುಸೀಸನ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article