ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು : ಮತ್ತೆ ದರ್ಶನ್ ಬಗ್ಗೆ ಮಾತನಾಡಿದ ಉಮಾಪತಿ
ಬೆಂಗಳೂರು: ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿಯವರ ಮಾತಿನ ಸಮರ ಮತ್ತೆ ಮುಂದುವರೆದಿದೆ. ದರ್ಶನ್ ಅವರು ಸದ್ಯಕ್ಕೆ ಸೈಲೆಂಟ್ ಆಗಿದ್ದರು, ಉಮಾಪತಿಯವರು ಹೇಳಿಕೆಗಳನ್ನು ಮುಂದುವರೆಸಿದ್ದಾರೆ. ಇತ್ತಿಚೆಗಷ್ಟೇ ದರ್ಶನ್ ಅವರ ಡಿಪರ್ವ ಕಾರ್ಯಕ್ರಮ ಶ್ರೀರಂಗಪಟ್ಟಣದಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ದರ್ಶನ್, ಇಂದು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ನಂಗೆ ನನ್ನನ್ನು ನಂಬಿ ಹಣ ಹಾಕಿದ ನಿರ್ಮಾಪಕರಷ್ಟೇ ಮುಖ್ಯ ಎಂದಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಜೊತೆಗೆ ಮಹಿಳೆಯರು ದರ್ಶನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದರು. ಈ ಬಗ್ಗೆ ನಿರ್ಮಾಪಕ ಉಮಾಪತಿ ಅವರು ಮಾತನಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಂದ ಉಮಾಪತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ದರ್ಶನ್ ಅವರು ಹೆಣ್ಣು ಮಕ್ಕಳ ಬಗ್ಗೆ ಪದ ಬಳಕೆ ಮಾಡಿದ್ದು ತಪ್ಪು. ಮಹಿಳೆಯರಿಗೆ ತೊಂದರೆಯಾಗುವುದಂತೆ ಏನೋ ಮಾತನಾಡಿದ್ದಾರಂತೆ. ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ. ಯಾಕೆ ಈ ವಿವಾದ ಆಯ್ತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲಾ ಹಿಟ್ಟೆ ತುಂಬಿದವರು. ನಾವೆಲ್ಲಾ ಹಸಿದವರು. ನಾವೆಲ್ಲಾ ಯಾವುದೋ ಮೂಲೆಯಲ್ಲಿ ಕೆಲಸ ಮಾಡಿಕೊಂಡು ಇದ್ದೇವೆ. ಎಲ್ಲರಿಗೂ ಸಮಸ್ಯೆಗಳು ಬರುತ್ತವೆ. ಆದರೆ ಅದನ್ನು ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು.
ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ದೇಹ ತೂಕ ಇದ್ದರೆ ಸಾಲದು, ಮಾತು ಕೂಡ ತೂಕವಾಗಿರಬೇಕು. ತಪ್ಪು ನಾನು ಮಾಡಿದ್ರು ತಪ್ಪೇ, ಬೇರೆಉವರು ಮಾಡಿದರೂ ತಪ್ಪೇ. ನಾವೆಲ್ಲಾ ಸಿನಿಮಾ ಮುಖಾಂತರ ಮೆಸೇಜ್ ಕೊಡಬೇಕು. ಈ ರೀತಿ ಕಾಂಟ್ರವರ್ಸಿ ಮಾಡಿಕೊಂಡು ಮೆಸೇಜ್ ಕೊಡುವಂತದ್ದು ಏನು ಇಲ್ಲ ಎಂದಿದ್ದಾರೆ.