ಮೈಸೂರು ಅರಮನೆಯಲ್ಲಿ ಸಂಭ್ರಮದ ಕ್ಷಣ : ಎರಡನೇ ಮಗುವಿಗೆ ತೊಟ್ಟಿಲ ಶಾಸ್ತ್ರ
ಮೈಸೂರು: ದಸರಾ ಸಂಭ್ರಮದಲ್ಲಿ ಯದುವೀರ್ ಮಹಾರಾಜ ಅವರು ಮತ್ತೊಮ್ಮೆ ತಂದೆಯಾಗಿದ್ದರು. ರಾಜಕುಮಾರಿ ತ್ರಿಷಿಕಾ ಅವರು ಎರಡನೇ ಬಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಂದು ಮಗುವಿನ ತೊಟ್ಟಿಲ ಶಾಸ್ತ್ರ ಅರಮನೆಯಲ್ಲಿ ನೆರವೇರಿದೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ತೊಟ್ಟಿಲ ಶಾಸ್ತ್ರ ನೆರವೇರಿದೆ. ಚಾಮುಂಡಿ ಬೆಟ್ಟದಲ್ಲೂ ಸಂಭ್ರಮ ಮನೆ ಮಾಡಿದೆ.
ತೊಟ್ಟಿಲು ಶಾಸ್ತ್ರಕ್ಕೂ ಮುನ್ನ ರಾಜವಂಶಸ್ಥರು ಚಾಮುಂಡಿದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ದೇವಿಯ ಪೂಜಾ ಕೈಕರ್ಯಗಳೆಲ್ಲ ಮುಗಿದ ಮೇಲೆ ತೊಟ್ಟಿಲ ಶಾಸ್ತ್ರವನ್ನು ಮಾಡಿದರು. ಚಾಮುಂಡಿ ಬೆಟ್ಟದ ದೇವಾಲಯದ ಬಳಿ ಇರುವ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಪೂಜೆ ಮಾಡಿದರು. ಬಳಿಕ ತೊಟ್ಟಿಲ ಶಾಸ್ತ್ರ ಮಾಡಿದ್ದಾರೆ. ರಾಜಾಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಶಾಸ್ತ್ರ ಸಂಪ್ರದಾಯದಂತೆ ತೊಟ್ಟಿಲ ಪೂಜೆ ನೆರವೇರಿದೆ.
ಯದುವೀರ್ ಅವರ ದೊಡ್ಡ ಮಗ ತನ್ನ ತಮ್ಮನ ತೊಟ್ಟಿಲ ಪಕ್ಕವೇ ನಿಂತು ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ದಸರಾ ಸಂಭ್ರಮದಲ್ಲಿ ಅಂದರೆ ಅಕ್ಟೋಬರ್ 14ರಂದು ದಸರಾ ಹಬ್ಬದ ದಿನವೇ ತ್ರಿಷಿಕಾ ಅವರು ಎರಡನೇ ಮಗುವಿಗೆ ಜನ್ಮ ನೀಡಿದರು. ಮೂರು ತಿಂಗಳು ತುಂಬುತ್ತಲೇ ಮಗುವಿಗೆ ತೊಟ್ಟಿಲ ಶಾಸ್ತ್ರ ಮಾಡಿ ಸಂಭ್ರಮಿಸಿದ್ದಾರೆ. ಎರಡನೇ ಮಗು ತೊಟ್ಟಿಲ ಒಳಗೆ ಮಲಗಿರುವ ಫೋಟೋ ವೈರಲ್ ಆಗಿದೆ. ಇಡೀ ಕುಟುಂಬ ಇಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ, ತೊಟ್ಟಿಲ ಶಾಸ್ತ್ರ ಮುಗಿಸಿದ್ದಾರೆ. ರಾಜಮನೆತನದಲ್ಲಿ ಮಕ್ಕಳ ನಗು ಕೇಳಿಸುತ್ತಿರುವುದು ಮೈಸೂರು ಜನರಲ್ಲಿ ಸಂತಸ ತಂದಿದೆ. ಅದರಲ್ಲೂ ಈಗ ಎರಡು ಮಕ್ಕಳು ಜನಿಸಿರುವುದು ಸಂಭ್ರಮವನ್ನು ಹೆಚ್ಚಿಸಿದೆ. ಇಡೀ ರಾಜ್ಯದ ಜನ ರಾಜಮನೆತನಕ್ಕೆ ಹಾರೈಸಿದ್ದಾರೆ.