Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಾಹನ ಸವಾರರಿಗೆ ಕೊಂಚ ರಿಲ್ಯಾಕ್ಸ್ : HSRP ಪ್ಲೇಟ್ ಅಳವಡಿಕೆ ಸಮಯ ವಿಸ್ತರಣೆ..!

02:11 PM Sep 18, 2024 IST | suddionenews
Advertisement

 

Advertisement

 

ವಾಹನ ಸವಾರರು ತಮ್ಮ ತಮ್ಮ ಗಾಡಿಗಳಿಗೆ HSRP ಪ್ಲೇಟ್ ಅಳವಡಿಕೆಗೆ ಮತ್ತಷ್ಟು ಸಮಯವನ್ನು ವಿಸ್ತರಣೆ ಮಾಡಲಾಗಿದೆ. 2019ರ ಏಪ್ರಿಲ್ 1ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲೇಬೇಕಾಗಿದೆ. ಗಾಡಿಗಳಿಗೆ ಅಳವಡಿಕೆ ಮಾಡಿಕೊಳ್ಳುವುದಕ್ಕೆ ಈಗಾಗಲೇ ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಇದೀಗ 5ನೇ ಬಾರಿಯೂ ವಿಸ್ತರಣೆಯಾಗಿದೆ. ಈ ಮೊದಲು ಸೆಪ್ಟೆಂಬರ್18ರವರೆಗೂ ನಂಬರ್ ಪ್ಲೇಟ್ ಅಳವಡಿಕೆಗೆ ಸಮಯ ನಿಗಧಿ ಮಾಡಲಾಗಿತ್ತು. ಇದೀಗ ಎರಡು ತಿಂಗಳವರೆಗೂ ಅವಧಿ ವಿಸ್ತರಿಸಲಾಗಿದೆ.

Advertisement

ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ವಕೀಲ ದೇವದತ್ ಕಾಮತ್ ಅವರು ಸಮಯಾವಕಾಶ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ನಡೆದ ವಿಚಾರಣೆಯಲ್ಲಿ ವಕೀಲರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ನವೆಂಬರೆ 20ರವರೆಗೂ ನಂಬರ್ ಪ್ಲೇಟ್ ಅಳವಡಿಕೆಗೆ ವಿಸ್ತರಣೆ ಮಾಡಿ, ಅರ್ಜಿ ವಿಚಾರಣೆಯನ್ನು ನವೆಂಬರ್ 20ಕ್ಕೆ‌ ಮುಂದೂಡಿಕೆ ಮಾಡಿದೆ.

ನ್ಯಾಯಮೂರ್ತಿಗಳಾದ ಕೆ.ಕಾಮೇಶ್ವರ ರಾವ್ ಹಾಗೂ ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ. ಇನ್ನು ಎರಡು ತಿಂಗಳು ಸಮಯ ಇರುವ ಕಾತಣ ವಾಹನ ಸವಾರರಿಗೆ ರಿಲ್ಯಾಕ್ಸ್ ಸಿಕ್ಕಿದೆ. HSRP ಪ್ಲೇಟ್ ಅಳವಡಿಸುವುದಕ್ಕೆ ಹೀಗೆ ಮಾಡಿ, ಮೊದಲು https://transport.Karnataka.gov.in ಲಾಗಿನ್ ಆಗಿ. book HSRP ಕ್ಲಿಕ್ ಮಾಡಿ. ನಿಮ್ಮ ವಾಹನದ ತಯಾರಕ ಕಂಪನಿ ಹೆಸರು ಹಾಕಿ, ವಾಹನದ ಮಾಹಿತಿಯನ್ನು ನಮೂದಿಸಿ, ಹತ್ತಿರದ ಡೀಲರ್ ಶೋ ರೂಂ ಆಯ್ಕೆ ಮಾಡಿಕೊಳ್ಳಿ. HSRP ಪ್ಲೇಟ್ ಗೆ ಪಾವತಿ ಮಾಡಿ. ಬಳಿಕ ನಿಮ್ಮ ಮೊಬೈಲ್ ನಂಬರಿಗೆ ಒಟಿಪಿ ಬರುತ್ತೆ, ನಿಮಗೆ ಯಾವ ದಿನ ಅನುಕೂಲವಿದೆಯೋ ಆ ದಿನವನ್ನು ಆಯ್ಕೆ ಮಾಡಿಕೊಂಡು ಪ್ಲೇಟ್ ಅಳವಡಿಸಿಕೊಳ್ಳಿ.

Advertisement
Tags :
bengaluruchitradurgaExtensionHSRP plateHSRP ಪ್ಲೇಟ್installationMotoristsrelaxationsuddionesuddione newsಚಿತ್ರದುರ್ಗಬೆಂಗಳೂರುರಿಲ್ಯಾಕ್ಸ್ವಾಹನ ಸವಾರರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article