ರಾಮಲಲ್ಲಾ ಮೂರ್ತಿ ಶಿಲೆಗೆ 80 ಸಾವಿರ ದಂಡ : ಬಿಜೆಪಿಯೇ ಕೊಡಲಿದೆ ಎಂದ ಪ್ರತಾಪ್ ಸಿಂಹ
ಮೈಸೂರು: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮಲಲ್ಲಾ ಮೂರ್ತಿಯ ಕೆತ್ತನೆಗೆ ಅಂತ ತಂದಿದ್ದ ಶಿಲೆಗೆ ಅಧಿಕಾರಿಗಳು ದಂಡ ವಿಧಿಸಿದ್ದರು. ಆ ದಂಡದ ಮೊತ್ತವನ್ನು ಗುತ್ತುಗೆದಾರ ಶ್ರೀನಿವಾಸ್ ಕಟ್ಟಿದ್ದರು. 80 ಸಾವಿರ ಹಣ ಕಟ್ಟಿದ್ದ ಶ್ರೀನಿವಾಸ್ ನಟರಾಜ್, ಆ ಬಗ್ಗೆ ಬೇಸರ ಹೊರ ಹಾಕಿದ್ದರು. ನನ್ನ ಹೆಂಡರಿ ಚಿನ್ನ ಮಾರಿ, ಹಣ ಕಟ್ಟಿದ್ದೀನಿ ಎಂದಿದ್ದರು. ಈ ವಿಚಾರ ತಿಳಿದ ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಬಾಲರಾಮನ ಮೂರ್ತಿ ಮೂಡಿಬಂದಿರುವ ಆ ಶಿಲೆಗೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಆ ದಂಡದ ಮೊತ್ತವನ್ನು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ನೀಡಿದ್ದರು. ಈಗ ಆ ಮೊತ್ತವನ್ನು ಬಿಜೆಪಿ ನೀಡಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಹಾರೋಹಳ್ಳಿ ಗುಜೇಗೌಡನಪುರ ಗ್ರಾಮದಲ್ಲಿನ ರಾಮದಾಸ್ ಎಂಬುವವರು ತಮ್ಮ ಜಮೀನಿನ ಸಮತಟ್ಟ ಮಾಡಲು, ಶ್ರೀನಿವಾಸ್ ಅವರಿಗೆ ಗುತ್ತಿಗೆ ನೀಡಲಾಗಿತ್ತು. ಆ ವೇಳೆ ಕೃಷ್ಣ ಶಿಲೆಗಳು ಸಿಕ್ಕಿದ್ದವು. ಇದಕ್ಕೂ ಮೊದಲು ಆ ಶಿಲೆಗಳನ್ನು ಹಲವರು ತೆಗೆದುಕೊಂಡು ಹೋಗಿದ್ದಾರೆ. ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾದ ಮೂರ್ತಿಯೂ ಇದೆ ಕಲ್ಲಿನದ್ದೆ. ಆದರೆ ಕಲ್ಲುಗಳು ಜಮೀನಿನಲ್ಲಿದ್ದಾಗ ನೋಡಿದ್ದ ಕೆಲವರು ದೂರು ನೀಡಿದ್ದರು. ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಭೂವಿಜ್ಞಾನ ಅಧಿಕಾರಿಗಳು ಶ್ರೀನಿವಾಸ್ ಅವರಿಗೆ ದಂಡ ವಿಧಿಸಿದ್ದರು. 80 ಸಾವಿರ ದಂಡವನ್ನು ಶ್ರೀನಿವಾಸ್ ಕಟ್ಟಿದ್ದರು. ಇದೀಗ ಅದಕ್ಕೆ ಪರಿಹಾರ ನೀಡುವುದಾಗಿ, ಪೂರ್ತಿ ಹಣವನ್ನು ಬಿಜೆಪಿಯೇ ನೀಡುವುದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.