For the best experience, open
https://m.suddione.com
on your mobile browser.
Advertisement

ಆ.1ರಿಂದ 7ನೇ ವೇತನ ಆಯೋಗ ಜಾರಿ : ಯಾರಿಗೆ ಎಷ್ಟೆಷ್ಟು ಹೈಕ್ ಆಗಲಿದೆ..?

08:51 PM Jul 22, 2024 IST | suddionenews
ಆ 1ರಿಂದ 7ನೇ ವೇತನ ಆಯೋಗ ಜಾರಿ   ಯಾರಿಗೆ ಎಷ್ಟೆಷ್ಟು ಹೈಕ್ ಆಗಲಿದೆ
Advertisement

ಬೆಂಗಳೂರು: ಏಳನೇ ವೇತನ ಆಯೋಗ ಜಾರಿಗೆ ಸರ್ಕಾರಿ ನೌಕರರು ಬಹಳ ತಿಂಗಳಿನಿಂದ ಕಾಯುತ್ತಿದ್ದಾರೆ. ಆದರೆ ಸರ್ಕಾರ ಎಲೆಕ್ಷನ್ ಬ್ಯುಸಿನಲ್ಲಿ ಚಾಲನೆ ಮಾಡಲೇ ಇಲ್ಲ. ಇದೀಗ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಆಗಸ್ಟ್ 1ರಿಂದ ಏಳನೇ ವೇತನ ಆಯೋಗ ಜಾರಿ ಮಾಡುವುದಾಗಿ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ.

Advertisement
Advertisement

ಏಳನೇ ವೇತನ ಆಯೋಗದ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಆದೇಶ ಹೊರಡಿಸಿದ್ದಾರೆ. ಈ ಆದೇಶ ಪ್ರತಿಯಲ್ಲಿ ಯಾರಿಗೆ ಎಷ್ಟು ಸ್ಯಾಲರಿ ಹೈಕ್ ಆಗಲಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ25 ಸ್ಥಾಯಿ ವೇತನ ಶ್ರೇಣಿಗಳನ್ನು ಇದೀಗ ಪ್ರಕಟ ಮಾಡಲಾಗಿದೆ.

2022ರ ನವೆಂಬರ್ 19ರಂದು ರಚಿಸಲಾಗಿದ್ದ ಏಳನೇ ರಾಜ್ಯ ವೇತನ ಆಯೋಗವೂ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಪಿಂಚಣಿ ಪರಿಷ್ಕರಣೆ ಕುರಿತಂತೆ ತನ್ನ ವರದಿಯ ಸಂಪುಟ 1 ಅನ್ನು ಸಲ್ಲಿಸಿದೆ. ವರದಿಯಲ್ಲಿನ ಶಿಫಾರಸುಗಳನ್ನು ಸರ್ಕಾರವು ಪರಿಗಣಿಸಿದ್ದು, ಅದರಂತೆ, 7ನೇ ರಾಜ್ಯ ವೇತನ ಆಯೋಗವು ಶಿಫಾರಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಜುಲೈ 1ರಿಂದ ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪರಿಷ್ಕೃತ ವೇತನ ಶ್ರೇಣಿಗಳ ಹಂಚಿಕೆ ಮತ್ತು ಅದರಲ್ಲಿ ವೇತನ ಹಾಗೂ ನಿವೃತ್ತಿ ವೇತನವನ್ನು ಕ್ರಮಬದ್ಧಗೊಳಿಸುವ ಕುರಿತು, ಸರ್ಕಾರದಿಂದ ವಿವರವಾದ ನಿಯಮ ಮತ್ತು ಆದೇಶಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು. ಪರಿಷ್ಕೃತ ವೇತನ ಶ್ರೇಣಿಯ ದರ ಈ ಕೆಳಗಿನಂತಿದೆ.

Advertisement

Advertisement

Tags :
Advertisement