For the best experience, open
https://m.suddione.com
on your mobile browser.
Advertisement

ಖಾಸಗಿ ಕಂಪನಿಗಳಲ್ಲಿ ಶೇ.75ರಷ್ಟು ಉದ್ಯೋಗ ಕನ್ನಡಿಗರಿಗೆ ಮೀಸಲು : ರಾಜ್ಯ ಸರ್ಕಾರದ ಮಹತ್ವದ ಆದೇಶ

05:17 PM Jul 17, 2024 IST | suddionenews
ಖಾಸಗಿ ಕಂಪನಿಗಳಲ್ಲಿ ಶೇ 75ರಷ್ಟು ಉದ್ಯೋಗ ಕನ್ನಡಿಗರಿಗೆ ಮೀಸಲು   ರಾಜ್ಯ ಸರ್ಕಾರದ ಮಹತ್ವದ ಆದೇಶ
Advertisement

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಂತ ಹೆಚ್ಚು ಬೇರೆ ರಾಜ್ಯದವರೇ ಉದ್ಯೋಗಿಗಳಾಗಿದ್ದಾರೆ. ಸ್ಥಳೀಯರಿಗೆ ಕೆಲಸ ಸಿಗುವುದೇ ಕಷ್ಟ. ಇದೀಗ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಕೈಗಾರಿಕೆಗಳು, ಕಾರ್ಖಾನೆಗಳು ಹಾಗೂ ಇತರೆ ಸಂಸ್ಥೆಗಳು ಶೇಕಡಾ 75 ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದೆ.

Advertisement
Advertisement

ಸಂಸ್ಥೆಗಳು ನಿರ್ವಹಣಾ ಸ್ಥಾನಗಳಲ್ಲಿ ಶೇಕಡಾ 50ರಷ್ಟು ಹಾಗೂ ನಿರ್ವಹಣೇತರ ಹುದ್ದೆಗಳಲ್ಲಿ ಶೇಕಡಾ 75ರಷ್ಟು ಹುದ್ದೆಗಳನ್ನು ಸ್ಥಳೀಯವಾಗಿ ಮೀಸಲಿಡಬೇಕೆಂದು ರಾಜ್ಯ ಸರ್ಕಾರ ಆದೇಶ ನೀಡಿದೆ. ಆಡಳಿತ ಕೋಟಾದಡಿ ಶೇಕಡಾ ಮೀಸಲು ಇಡಲಾಗುತ್ತದೆ. ಆಡಳಿತಾತ್ಮಕ ಕೋಟಾದಡಿ ಸೂಪರ್ ವೈಸರ್, ಮ್ಯಾನೇಜರ್, ತಾಂತ್ರಿಕ ತಂತ್ರಜ್ಞರಯ ಸೇರಿದಂತೆ ಹಲವು ಹುದ್ದೆಗಳು ಬರಲಿವೆ. ಇದು ಗುತ್ತಿಗೆ ಆಧಾರದ ಮೇಲಿನ ಕೆಲಸಗಳಿಗೂ ಅನ್ವಯವಾಗಲಿದೆ.

ಈ ಸಂಬಂಧ ಮಾತನಾಡಿರುವ ಡಿಸಿಎಂ ಡಿಕೆ ಶಿವಕುನಾರ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿರುವುದೇ ಕನ್ನಡಿಗರ ಸ್ವಾಭಿಮಾನವನ್ನು ಎತಚತಿ ಹಿಡಿಯಬೇಕು ಎಂಬ ಕಾರಣಕ್ಕಾಗಿ. ಕನ್ನಡ ಬೋರ್ಡ್, ಭಾಷೆ, ಧ್ವಜ ಬಳಕೆ, ನಮ್ಮ ಸಂಸ್ಕೃತಿ, ಕಡತಗಳಲ್ಲಿ ಕನ್ನಡ ಬಳಕೆ ಆಗಲಿದೆ. ಮುಂದೆ ಉದ್ಯೋಗ ಸೃಷ್ಟಿಯೂ ಇರಬಹುದು. ಕಡ್ಡಾಯವಾಗಿ ಕನ್ನಡಿಗರಿಗೆ ಇಷ್ಟು ಪರ್ಸೆಂಟ್ ಅಂತ ಇರಬೇಕು ಎಂಬ ತೀರ್ಮಾನ ಮಾಡಿದ್ದೇವೆ. ಈ ಸಂಬಂಧ ಬಿಲ್ ತರುತ್ತಿದ್ದೇವೆ ಎಂದಿದ್ದಾರೆ.

Advertisement

ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಸಿಗಬೇಕು, ಆದ್ಯತೆ ಸಿಗಬೇಕು ಎಂದು ಕಂಡ ಕನಸು ನನಸಾಗುತ್ತಿದೆ. ಖಾಸಗಿ ವಲಯದಲ್ಲಿ ಇನ್ಮುಂದೆ ಕನ್ನಡಿಗರಿಗೆ ಉದ್ಯೋಗ ಸಿಗುವುದು ಗ್ಯಾರಂಟಿಯಾಗಿದೆ. ಈ ಆದೇಶಕ್ಕೆ ಹಲವು ಉದ್ದಿಮೆದಾರರು ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ.

Advertisement

Tags :
Advertisement