Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿನ್ನದ ಬೆಲೆಯಲ್ಲಿ ಮತ್ತೆ 70 ರೂಪಾಯಿ ಏರಿಕೆ : ಲಕ್ಷ ತಲುಪುವ ಮುನ್ಸೂಚನೆ..!

02:04 PM Nov 20, 2024 IST | suddionenews
Advertisement

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ನಿನ್ನೆಯಷ್ಟೇ ಏರಿಕೆಯಾಗಿದ್ದ ಚಿನ್ನ ಇಂದು ಮತ್ತೆ ಏರಿಕೆಯತ್ತಲೆ ಮುಖ ಮಾಡಿದೆ. ಇಂದು ಕೂಡ ಒಂದು ಗ್ರಾಂ ಗೆ 70-80 ರೂಪಾಯಿ ಜಾಸ್ತಿಯಾಗಿದೆ. ಇದುಪ ಆಭರಣ ಪ್ರಿಯರಿಗೆ ಬೇಸರ ತರಿಸಿದೆ. ಮುಂದಿನ ವರ್ಷದ ಅಂತ್ಯದೊಳಗೆ ಅಂದ್ರೆ 2025ರ ಡಿಸೆಂಬರ್ ಒಳಗೆ ಒಂದು ಗ್ರಾಂಗೆ 9 ಸಾವಿರಕ್ಕೂ ಅಧಿಕವಾಗುವ ಸಾಧ್ಯತೆಯೂ ಇದೆ.

Advertisement

ಅಷ್ಟಕ್ಕೂ ಚಿನ್ನದ ದರ ಹೀಗೆ ಏರುತ್ತಲೆ ಇರುವುದಕ್ಕೆ ಕಾರಣವೇನು. ಇದಕ್ಕೆ ಹಲವು ಕಾರಣಗಳಿರಬಹುದು. ಅದರಲ್ಲಿ ಪ್ರಮುಖವಾದುದು ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಖರೀದಿ ಮತ್ತು ಬಡ್ಡಿದರದ ಕಡಿತ ಸಾಧ್ಯತೆ ಎನ್ನಲಾಗಿದೆ. ಆರ್ಬಿಐ ಸೇರಿದಂತೆ ಜಗತ್ತಿನ ಸೆಂಟ್ರಲ್ ಬ್ಯಾಂಕ್ ಗಳು ಚಿನ್ನದ ಖರೀದಿಯಲ್ಲಿ ತೊಡಗಿವೆ. ಹೀಗಾಗಿಯೇ ಚಿನ್ನದ ಬೆಲೆಯಲ್ಲೂ ಏರಿಕೆ ಕಂಡಿದೆ.

ಇನ್ನು ಇಂದು ಚಿನ್ನದ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ:

Advertisement

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 7,135 ರೂಪಾಯಿ ಇದೆ. ಅಪರಂಜಿ ಚಿನ್ನ ಅಂದ್ರೆ 24 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 7,780 ರೂಪಾಯಿ ಆಗಿದೆ. ಭಾರತದಲ್ಲಿ ಸದ್ಯ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ದರ 71,350 ರೂಪಾಯಿ ಆಗಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯಲ್ಲಿ 77,800 ರೂಪಾಯಿ ಹತ್ತು ಗ್ರಾಂ ಚಿನ್ನಕ್ಕೆ ಏರಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೆ ಇದ್ದು, 100 ಗ್ರಾಂ ಬೆಳ್ಳಿ ಬೆಲೆ 9,160 ರೂಪಾಯಿ ಆಗಿದೆ.

Advertisement
Tags :
bengaluruchitradurgakannadaKannadaNewsprice of goldsuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಚಿನ್ನದ ಬೆಲೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article