For the best experience, open
https://m.suddione.com
on your mobile browser.
Advertisement

ದರ್ಶನ್ ಗೆ ಆತಿಥ್ಯ ನೀಡಿದ್ದ 7 ಅಧಿಕಾರಿಗಳು ಅಮಾನತು : ಸಚಿವ ಪರಮೇಶ್ವರ್ ಹೇಳಿದ್ದೇನು..?

11:07 AM Aug 26, 2024 IST | suddionenews
ದರ್ಶನ್ ಗೆ ಆತಿಥ್ಯ ನೀಡಿದ್ದ 7 ಅಧಿಕಾರಿಗಳು ಅಮಾನತು   ಸಚಿವ ಪರಮೇಶ್ವರ್ ಹೇಳಿದ್ದೇನು
Advertisement

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆದ್ರೆ ನಿನ್ನೆ ಒಂದು ಫೋಟೋ ವೈರಲ್ ಆಗಿತ್ತು. ಜೈಲಿನಲ್ಲಿಯೇ ಟೀ ಕುಡಿಯುತ್ತಾ, ಸಿಗರೇಟು ಸೇದುತ್ತಾ ಅಯಾಗಿದ್ದರು. ಜೊತೆಗೆ ರೌಡಿಶೀಟರ್ ಬಳಿ ವಿಡಿಯೋ ಕಾಲ್ ನಲ್ಲಿ ಕೂಡ ಮಾತನಾಡಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದ್ದು, ದರ್ಶನ್ ಅವರಿಗೆ ಫೋನ್ ವ್ಯವಸ್ಥೆ ಕೂಡ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಈ ಫೋಟೋ ವೈರಲ್ ಆದ ಬೆನ್ನಲ್ಲೇ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

Advertisement
Advertisement

ಈ ಸಂಬಂಧ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ದರ್ಶನ್ ಅವರಿಗೆ ಜೈಲಿನಲ್ಲಿ ಆತಿಥ್ಯ ನೀಡಿದ್ದಕ್ಕೆ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ವಿಚಾರ ನಿನ್ನೆ‌ ಗೊತ್ತಾಯ್ತು. ಹಿರಿಯ ಅಧಿಕಾರಿಗಳು ಭಾಗಿಯಾಗಿದ್ರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇವೆ. ಜೈಲಿನ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಹಿರಿಯ ಅಧಿಕಾರಿಗಳ ಬಗ್ಗೆ ಇನ್ನು ತನಿಖೆ ಮಾಡಬೇಕಿದೆ. ರಾತ್ರಿ 1 ಗಂಟೆಯವರೆಗೂ ಜೈಲಿನಲ್ಲಿ ತನಿಖೆ ಮಾಡಲಾಗಿದೆ. ಜೈಲಿನ ಡಿಜಿಯವರ ಜೊತೆಗೆ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ ತನಿಖೆ ನಡೆಸಿದ್ದೇವೆ. ದರ್ಶನ್ ಬಹಳ ಆರಾಮವಾಗಿ ಇದ್ದಾರೆ ಎಂದು ಫೋಟೋ ವೈರಲ್ ಆಗಿದೆ. ಹೀಗಾಗಿ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

Advertisement

ಶರಣವಸವ ಅಮಿನಾಗಾಡ್, ಪ್ರಭು ಎಸ್ ಖಂಡೇಲ್ ವಾಲ್, ಅಸಿಸ್ಟೆಂಟ್ ಜೈಲರ್ ಗಳಾದ ಎಲ್.ಎಸ್.ತಿಪ್ಪೇಸ್ವಾಮಿ ಹಾಗೂ ಶ್ರೀಕಾಂತ್ ತಳವಾರು, ಹೆಡ್ ವಾರ್ಡ್ ಗಳಾದ ವೆಂಕಪ್ಪ ಕೊರ್ತಿ ಹಾಗೂ ಸಂಪತ್ ಕುಮಾರ್ ಕಡಾಪಟ್ಟಿ, ವಾರ್ಡನ್ ಬಸಪ್ಪ ತೇಲಿಯನ್ನು ಅಮಾನತು ಮಾಡಲಾಗಿದೆ.

Advertisement

Tags :
Advertisement