Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಡಿಸೆಂಬರ್ 6 ರಂದು ಡಾ.ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನ | ಭೀಮ ಜ್ಞಾನ ಜ್ಯೋತಿ ನಮನ ಕಾರ್ಯಕ್ರಮ

02:56 PM Dec 04, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 04 :  ಭೀಮಯಾತ್ರೆ ಬಳಗದವತಿಯಿಂದ ಭಾರತರತ್ನ  ಡಾ.ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 6 ರ ಸಂಜೆ 6 ಗಂಟಗೆ ನಗರದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಭೀಮ ಜ್ಞಾನ ಜ್ಯೋತಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಭೀಮ ಯಾತ್ರೆ ಬಳಗ ತಿಳಿಸಿದೆ.

Advertisement

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನ್ಯಾಯವಾದಿಗಳು ಬಳಗದ ಮುಖಂಡರಾದ ಈ.ಎಸ್.ರವೀಂದ್ರ ರವರು ಸಂವಿಧಾನದ ಅರಿವಿಗಾಗಿ ಮಾನವೀಯತೆಯ ಉಳಿವಿಗಾಗಿ ಬುದ್ದ ಬಸವ ಅಂಬೇಡ್ಕರ್ ತತ್ವದಡಿಯಲ್ಲಿ ಭೀಮಯಾತ್ರೆ ನಡೆಯುತ್ತಿದ್ದು, ಡಿ.6ರ ಅಂಬೇಡ್ಕರ್ ರವರ ಪರಿನಿರ್ವಾಣ ದಿನವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದ್ದು, ನಮ್ಮೆಲ್ಲರ ಬದುಕು, ಉಸಿರು, ಜೀವನವನ್ನು ನೀಡಿರುವ ಮಹಾನಾಯಕ ಅಂಬೇಡ್ಕರ್ ರವರಿಗೆ ನಮನ ಸಲ್ಲಿಸುವುದು ಅದ್ಯ ಕರ್ತವ್ಯವಾಗಿದೆ.

ಪ್ರಪಂಚದ 197 ದೇಶಗಳು ಸಹಾ ಅಂಬೇಡ್ಕರ್ ರವರಿಗೆ ಈ ದಿನದಂದು ನಮನ ಸಲ್ಲಿಸುತ್ತಿದ್ದಾರೆ. ಅದರಂತೆ ಈ ಮಹಾನ್ ವ್ಯಕ್ತಿಯನ್ನು ಸ್ಮರಣೆ ಮಾಡುವುದು ಸಹಾ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
600 ಸಾಮಂತ ಪ್ರಾಂತ್ಯಗಳನ್ನು ವಿವಿಧ ಪ್ರದೇಶಗಳನ್ನು ವಿವಿಧ ಧರ್ಮಗಳನ್ನು ನೂರಾರು ಭಾಷೆಗಳನ್ನು ಒಟ್ಟುಗೂಡಿಸಿ ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಿ ಭವ್ಯ ಭಾರತವನ್ನು ಪ್ರಜಾಸತಾತ್ಮಕ ಗಣರಾಜ್ಯವನ್ನಾಗಿ ರೂಪಿಸಿ ಸಂವಿಧಾನವನ್ನು ರಚಿಸಿದ ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪುಣ್ಯ ಸ್ಮರಣೆ ಕಾರ್ಯಕ್ರಮವೂ ಅವಿಸ್ಮರಣೀಯವಾಗಿದೆ ಎಂದ ಅವರು, ಇದರ ಅಂಗವಾಗಿ ಡಿ.6 ರ ಸಂಜೆ 6 ಗಂಟೆಗೆ ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಭೀಮಾಯಾತ್ರೆ ಬಳಗವು ಭೀಮ ಜ್ಞಾನ ಜ್ಯೋತಿಯನ್ನು ಹಮ್ಮಿಕೊಂಡಿದೆ.

ಅಂದು ವಿಶ್ವಕ್ಕೆ ಸಾರಿ ಹೇಳಲು ಭೀಮಭೀಮಾನಿಗಳು, ಬಸವಾಭಿಮಾನಿಗಳು, ಬುದ್ದಾಭಿಮಾನಿಗಳು ತಮ್ಮ ಮನೆಯಿಂದ ಮಣ್ಣಿನ ಹಣತೆಯ ಭೀಮ ಜ್ಯೋತಿಯನ್ನು ತರುವುದರ ಮೂಲಕ ಭೀಮ ಪ್ರತಿಮೆಗೆ ಬೆಳಗುವುದು ಮೂಲಕ ಪರಿನಿರ್ವಾಣ ದಿನವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಬೇಕಿದೆ ಎಂದು ತಿಳಿಸಿದರು.
ಅಂದು ಸಂಜೆ ದೀಪಗಳೊಂದಿಗೆ ಅಂಬೇಡ್ಕರ್ ಪ್ರತಿಮೆಯಿಂದ ಸಾಗಿದ ಮೆರವಣಿಗೆಯೂ ಬಿ.ಡಿ.ರಸ್ತೆಯ ಮೂಲಕ ಸಂತೇಪೇಟೆಗೆ ಗಾಂಧಿ ವೃತ್ತವನ್ನು ದಾಟಿ ನಂತರ ಬಿ.ಡಿ.ರಸ್ತೆಯ ಮೂಲಕ ಮರಳಿ ಅಂಬೇಡ್ಕರ್ ಪ್ರತಿಮೆಯನ್ನಯ ತಲುಪಲಿದೆ ಎಂದು ರವೀಂದ್ರ ಹೇಳಿದರು.

ಗೋಷ್ಠಿಯಲ್ಲಿ ನ್ಯಾಯವಾದಿಗಳಾದ ಶರಣಪ್ಪ, ಈ.ಎಸ್.ರವಿಕುಮಾರ್, ಮುಖಂಡರಾದ ಡಿ.ಕುಮಾರಸ್ವಾಮಿ, ಟಿ.ಸತೀಶ್, ಆರ್.ಪ್ರಕಾಶ್, ಎಸ್.ಮಂಜಣ್ಣ, ಜೆ.ಜೆ,ಹಟ್ಟಿ ರಘು, ಕೃಷ್ಣಮೂರ್ತಿ ಹೆಚ್.ನಟರಾಜ್ ಭಾಗವಹಿಸಿದ್ದರು.

Advertisement
Tags :
6th DecemberBhima Gnana JyotichitradurgaDr BR AmbedkarNamana programParinirvan Dayಚಿತ್ರದುರ್ಗಡಾ.ಬಿ.ಆರ್.ಅಂಬೇಡ್ಕರ್ಡಿಸೆಂಬರ್ 6ನಮನ ಕಾರ್ಯಕ್ರಮಪರಿನಿರ್ವಾಣ ದಿನಭೀಮ ಜ್ಞಾನ ಜ್ಯೋತಿ
Advertisement
Next Article