Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನೀಟ್ ಪರೀಕ್ಷೆಯಲ್ಲಿ ರಾಜ್ಯದ 6 ವಿದ್ಯಾರ್ಥಿಗಳು ಟಾಪರ್ಸ್ : ಇಲ್ಲಿದೆ ಮಾಹಿತಿ

01:10 PM Jun 05, 2024 IST | suddionenews
Advertisement

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ 2024ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 6 ವಿದ್ಯಾರ್ಥಿಗಳು ಟಾಪರ್ಸ್ ಆಗಿದ್ದಾರೆ. ಅತ್ಯುನ್ನತ ಸ್ಥಾನ ಪಡೆದುಕೊಂಡಿದ್ದಾರೆ. ದೇಶದಲ್ಲಿ ಟಾಪ್ 100 ವಿದ್ಯಾರ್ಥಿಗಳ ಸಾಲಿನಲ್ಲಿ ರಾಜ್ಯದ ಆರು ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ಇನ್ನು ನೀಟ್ ಬರೆದ ವಿದ್ಯಾರ್ಥಿಗಳಲ್ಲಿ ಆಲ್ ಇಂಡಿಯಾ ರ್ಯಾಂಕ್ -1 ಅರ್ಜುನ್ ಕಿಶೋರ್ ಪಡೆದುಕೊಂಡಿದ್ದಾರೆ. 720 ಅಂಕಕ್ಕೆ 720 ಅಂಕವನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.

Advertisement

ಕರ್ನಾಟಕದ ವಿದ್ಯಾರ್ಥಿಗಳು ಕೂಡ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದು, ವಿ.ಕಲ್ಯಾಣ್, ಶ್ಯಾಮ್ ಶ್ರೇಯಸ್ ಜೋಸೆಫ್, ಪದ್ಮನಾಭ್ ಮೆನನ್, ಪ್ರಜ್ಞಾ ಪಿ ಶೆಟ್ಟಿ, ಖುದಿ ಮಗನೂರ್ ವಿದ್ಯಾರ್ಥಿಗಳು ಟಾಪ್ 100ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಶೇ.99.98 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಎನಿಸಿಕೊಂಡಿದ್ದಾರೆ.

ನೀಟ್ ಪರೀಕ್ಷೆಯ ಫಲಿತಾಂಶವನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಬಿಡುಗಡೆ ಮಾಡಿದೆ. ರಿಸಲ್ಟ್ ಚೆಕ್ ಮಾಡಬೇಕೆಂದರೆ ಎನ್ಟಿಎ ನೀಟ್ ಪೋರ್ಟಲ್ ನಲ್ಲಿ ಲಾಗಿನ್ ಆಗುವ ಮೂಲಕ ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ವೈದ್ಯಕೀಯ ಕೋರ್ಸ್ ಗಳಿಗಾಗಿ ಪ್ರವೇಶಾತಿಗಾಗಿ ದೇಶದಾದ್ಯಂತ ಮೇ-5 ರಂದು ನೀಟ್ ಪರೀಕ್ಷೆಯನ್ನು ನಡೆಸಲಾಗಿತ್ತು. 13 ಭಾಷೆಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯನ್ನು 23,33, 297 ವಿದ್ಯಾರ್ಥಿಗಳು ಬರೆದಿದ್ದರು. ಇದೀಗ ಪರೀಕ್ಷೆಯ ಫಲಿತಾಂಶ ಬಂದಿದ್ದು, ಟಾಪರ್ಸ್ ಬಂದ ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ. ಇಷ್ಟದ ಕಾಲೇಜು ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಕರ್ನಾಟಕದಲ್ಲೂ ಆರು ಜನ ವಿದ್ಯಾರ್ಥಿಗಳು ಟಾಪರ್ಸ್ ಬಂದಿದ್ದಾರೆ. ಅದರಲ್ಲೂ ಅರ್ಜುನ್ ಕಿಶೋರ್ ಎಂಬಾತ ದೇಶಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ.

Advertisement

Advertisement
Tags :
6 ವಿದ್ಯಾರ್ಥಿಗಳು ಟಾಪರ್ಸ್bengaluruchitradurgaHere is the informationKarnatakaneet examstate topperssuddionesuddione newsಇಲ್ಲಿದೆ ಮಾಹಿತಿಚಿತ್ರದುರ್ಗನೀಟ್ ಪರೀಕ್ಷೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article