Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆಯಿಂದ 500 ಎಕರೆ ಭೂಮಿ

01:36 PM Jun 14, 2024 IST | suddionenews
Advertisement

 

Advertisement

 

ಬೆಂಗಳೂರು: ಎತ್ತಿನಹೊಳೆ ಯೋಜನೆ ಮಾಡಲು ಬಿರುಸಿನ ಕೆಲಸಗಳು ನಡೆಯುತ್ತಿವೆ. ಆದರೆ ಈ ಯೋಜನೆಗೆ 500ಎಕರೆ ಭೂಮಿಯ ಅವಶ್ಯಕತೆ ಇದ್ದು, ಇದೀಗ ಅರಣ್ಯ ಇಲಾಖೆ ಈ ಭೂಮಿಯನ್ನು ಕೊಡುವುದಕ್ಕೆ ತೀರ್ಮಾನ ಮಾಡಿದೆ. ಕೃಷ್ಣ ಭೈರೇಗೌಡ ಹಾಗೂ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಜೊತೆಗೆ ಸಮನ್ವಯ ಸಭೆ ನಡೆಸಿ, ಆ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ.

Advertisement

ಈ ಸಂಬಂಧ ಮಾತನಾಡಿರುವ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮರ್ ಅವರು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸಭೆ ಕರೆಯಲಾಗಿದೆ. ಈಗ ಅರಣ್ಯ ಇಲಾಖೆಯು ಭೂಮಿಯನ್ನು ನೀಡುವುದಕ್ಕೆ ಒಪ್ಪಿಗೆ ನೀಡಿದೆ. ಕಂದಾಯ ಇಲಾಖೆಗೆ ಪರ್ಯಾಯವಾಗಿ 500 ಎಕರೆಯನ್ನು ಬೇರೆ ಸ್ಥಳದಲ್ಲು ನೀಡಲಿದೆ. ನಾವೂ ಈ ಪ್ರಕ್ರಿಯೆಯನ್ನು ಕಾನೂನಿನ ಚೌಕಟ್ಟಿನ ಒಳಗೆಯೇ ಪೂರ್ಣಗೊಳಿಸುತ್ತೇವೆ‌ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆಯನ್ನು ಗಮನಿಸಿ ಗುರುತಿಸಿಕೊಳ್ಳಲಾಗಿದೆ. 60 ಕಿ.ಮೀ ವ್ಯಾಪ್ತಿಯಲ್ಲಿ ಕನಿಷ್ಠ 20 ಸಮಸ್ಯೆಗಳನ್ನು ಪರಿಹರಿಸಬೇಕು. ಕಂದಾಯ ಮತ್ತು ಜಲಸಂಪನ್ಮೂಲ ಇಲಾಖೆಗಳೊಂದಿಗೆ ಅರಣ್ಯ ಇಲಾಖೆ ಜಂಟು ಸಮೀಕ್ಷೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿರುವ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಸರ್ಕಾರ ರೈತರಿಗೆ ಕೆಲವೆಡೆ 51 ಕೋಟಿ ರೂಪಾಯಿ ಪಾವತಿಸಬೇಕಿದ್ದು, ಅದರಲ್ಲಿ ಈಗಾಗಲೇ 10 ಕೋಟಿ ರೂಪಾಯಿ ಪಾವತಿಸಲಾಗಿದೆ. ಅರಣ್ಯ ಅಥವಾ ಕಂದಾಯ ಇಲಾಲಕೆಗೆ ಸೇರಿದ ಜಮೀನಿನ ಕುರಿತು ಕೆಲ ಗೊಂದಲಗಳಿದ್ದು, ಅವುಗಳನ್ನು ಸಚಿವ ಸಂಪುಟದ ಮುಂದೆ ಇಟ್ಟು ವಿಂಗಡಿಸಲಾಗುವುದು. ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿ ಬಳಿ ಸಮತೋಲನ ಜಲಾನಯನ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದ್ದು, ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗುವುದು ಎಂದಿದ್ದಾರೆ.

Advertisement
Tags :
bengaluruchitradurgaEttinhole projectforest departmentsuddionesuddione newsಅರಣ್ಯ ಇಲಾಖೆಎಕರೆಎತ್ತಿನಹೊಳೆ ಯೋಜನೆಚಿತ್ರದುರ್ಗಬೆಂಗಳೂರುಭೂಮಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article