For the best experience, open
https://m.suddione.com
on your mobile browser.
Advertisement

ತುಮಕೂರು ಬೆಳೆಗಾರರಿಂದ ಖರೀದಿಸಿದ ಕೊಬ್ಬರಿಗೆ 346.50 ಕೋಟಿ ರೂಪಾಯಿ ರೈತರ ಖಾತೆಗೆ ಜಮೆ..!

11:46 AM Aug 06, 2024 IST | suddionenews
ತುಮಕೂರು ಬೆಳೆಗಾರರಿಂದ ಖರೀದಿಸಿದ ಕೊಬ್ಬರಿಗೆ 346 50 ಕೋಟಿ ರೂಪಾಯಿ ರೈತರ ಖಾತೆಗೆ ಜಮೆ
Advertisement

ತುಮಕೂರು: ಈ ಭಾಗದ ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸಚಿವ ವಿ.ಸೋಮಣ್ಣ ಕೊಬ್ಬರಿಯನ್ನು ಖರೀದಿ ಮಾಡಿದ್ದರು. ಇದೀಗ ಅದರ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಿದೆ. ಇದು ರೈತರಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಒಟ್ಟು 346.50 ಕೋಟಿ ಹಣ ಜಮೆಯಾಗಿದೆ.

Advertisement

2024ರ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ರೈತರಿಂದ ಖರೀದಿಸಲ್ಪಟ್ಟ ಉಂಡೆ ಕೊಬ್ಬರಿ ಖರೀದಿಗೆ ಸಂಬಂಧ ಪಟ್ಟ ಮೊತ್ತವನ್ನು ಪಾವತಿ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ. ಜಿಲ್ಲೆಯ 27 ಸಾವಿರ ರೈತರಿಂದ 3,15,000 ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮಾಡಲಾಗಿತ್ತು. ಈ ಸಂಬಂಧ ಒಟ್ಟು ಬಾಬ್ತು 378 ಕೋಟಿಗಳನ್ನು ತುಮಕೂರಿ‌ನ ಕೊಬ್ಬರಿ ಬೆಳೆಗಾರರಿಗೆ ಪಾವತಿ ಮಾಡಬೇಕಾಗಿತ್ತು. ಆಗಸ್ಟ್ 5 ರವರೆಗೆ ಸುಮಾರು 346.50 ಕೋಟಿ ಪಾವತಿ ಮಾಡಲಾಗಿದೆ. ಈ ಹಣ ನೇರವಾಗಿ ರೈತರ ಖಾತೆಗೆ ತಲುಪಿದೆ ಎಂದಿದ್ದಾರೆ.

ಕೇಂದ್ರದಲ್ಲಿನ ನೆಫೆಡ್ ಸಂಸ್ಥೆಯಿಂದ ರಾಜ್ಯಕ್ಕರ ಬರಬೇಕಾದ ಬಾಕಿ ಮೊತ್ತ 69ಬ್ಯಾಕ್ ಕೋಟೆಗಳನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲು ಕ್ರಮ ಜರುಗಿಸಬೇಕೆಂದಯ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಗೆ ಹಣ ಸಂದಾಯವಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸೋಮಣ್ಣ ಅವರು, ಪ್ರಧಾನಿ ಮೋದಿ ಅವರಿಗೆ, ಕೇಂದ್ರದ ಕೃಷಿ ಹಾಗೂ ರೈತರ ಕಲ್ಯಾಣ ಖಾತೆಯ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತುಮಕೂರಿನ ರೈತರ ಪರವಾಗಿ ಧನ್ಯವಾದ ತಿಳಿಸಿದ್ದಾರೆ. ನೇರವಾಗಿ ಖಾತೆಗೆ ಹಣ ಬಂದ ಕಾರಣ ತುಮಕೂರು ಭಾಗದ ರೈತರು ಖುಷಿಯಾಗಿದ್ದಾರೆ.

Advertisement

Tags :
Advertisement