Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 32 ರೂಪಾಯಿ‌ ಇಳಿಕೆ..!

11:53 AM Apr 01, 2024 IST | suddionenews
Advertisement

ದಿನೇ ದಿನೇ ಏರಿಕೆಯಾಗುತ್ತಿದ್ದ ವಾಣಿಜ್ಯ ಸಿಲಿಂಡರ್ ಬೆಲೆಯಿಂದಾಗಿ ಗ್ರಾಹಕರು ತತ್ತರಿಸಿ ಹೋಗಿದ್ದರು. ಇದೀಗ ಚುನಾವಣೆಯ ಬಿಸಿಯ ನಡುವೆ ಕೊಂಚ ಸಮಾಧಾನಕಾರ ವಿಚಾರ ಬೆಳಕಿಗೆ ಬಂದಿದೆ. ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದ್ದು, 19 ಕೆಜಿಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 32 ರೂಪಾಯಿ ಇಳಿಕೆ ಕಂಡಿದೆ. ಇದು ಗ್ರಾಹಕರಿಗೂ ಹಾಗೂ ಉದ್ಯಮಿಗಳಿಗೂ ಸಮಾಧಾನ ತಂದಿದೆ.

Advertisement

 

ಹೊಸ ಹಣಕಾಸು ವರ್ಷ ಆರಂಭವಾದ ಹಿನ್ನೆಲೆ ಹಲವು ವ್ಯವಾಹಾರಿಕ ಬದಲಾವಣೆಗಳು ಆಗುತ್ತಿವೆ. ಅದರಲ್ಲಿ ವಾಣಿಜ್ಯ ಸಿಲಿಂಡರ್ ಕೂಡ ಒಂದು. ಇಳಿಕೆಯಾದ ಮೇಲೆ 19 ಕೆಜಿಯ ಸಿಲಿಂಡರ್ ಬೆಲೆ ಈಗ 1764.50 ರೂಪಾಯಿ ಆಗಿದೆ. ಮುಂಬೈನಲ್ಲಿ ಸಿಲಿಂಡರ್​ ಬೆಲೆ 31.50 ರೂಪಾಯಿಯಾಗಿದ್ದು, ಗ್ರಾಹಕರಿಗೆ 1717.50 ರೂಪಾಯಿಗೆ ಸಿಲಿಂಡರ್​ ಖರೀದಿಸಬಹುದಾಗಿದೆ. ಚೆನ್ನೈನಲ್ಲಿ ಸಲಿಂಡರ್​ 30.50 ರೂಪಾಯಿ ಇಳಿಕೆಯಾಗಿದೆ. ಹಾಗಾಗಿ 1930 ರೂಪಾಯಿಗೆ ಸಿಲಿಂಡರ್​ ಸಿಗುತ್ತಿದೆ.

Advertisement

ಕೇಂದ್ರ ಸರ್ಕಾರ ಮಹಿಳಾ ದಿನಾಚರಣೆಯಂದು 14 ಕೆಜಿ ಗೃಹಬಳಕೆಯ ಸಿಲಿಂಡರ್​ ಬೆಲೆ ಇಳಿಕೆ ಮಾಡಿತ್ತು. ಎಲ್​ಪಿಜಿ ಸಿಲಿಂಡರ್​ ಬೆಲೆಯನ್ನು 100ರೂಗೆ ಇಳಿಸಿತ್ತು. ಆದರೆ ಪ್ರಸ್ತುತ ಸಿಲಿಂಡರ್​ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯಕ್ಕೆ ಕೇವಲ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಮಾತ್ರ ಇಳಿಕೆ ಕಂಡಿದೆ. ಮುಂದೆ ಗೃಹಬಳಕೆಯ ಸಿಲಿಂಡರ್ ನಲ್ಲೂ ಮತ್ತೊಮ್ಮೆ ಇಳಿಸುವ ಸಾಧ್ಯತೆಯನ್ನು ತಳ್ಳುವ ಹಾಗಿಲ್ಲ.

Advertisement
Tags :
bengaluruchitradurgacommercial cylinderPricereductionrupeessuddionesuddione newsಇಳಿಕೆಚಿತ್ರದುರ್ಗಬೆಂಗಳೂರುಬೆಲೆರೂಪಾಯಿವಾಣಿಜ್ಯ ಸಿಲಿಂಡರ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article