For the best experience, open
https://m.suddione.com
on your mobile browser.
Advertisement

ಹೆಚ್ಡಿಕೆ ಜನತಾ ದರ್ಶನಕ್ಕೆ 3 ಸಾವಿರ ಜನ ಬಂದಿದ್ರು..ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಯೋಜನೆಗಳನ್ನ ಕೊಡಿಸಲಿ ನೋಡೋಣಾ : ಚೆಲುವರಾಯಸ್ವಾಮಿ

09:04 PM Jul 06, 2024 IST | suddionenews
ಹೆಚ್ಡಿಕೆ ಜನತಾ ದರ್ಶನಕ್ಕೆ 3 ಸಾವಿರ ಜನ ಬಂದಿದ್ರು  ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಯೋಜನೆಗಳನ್ನ ಕೊಡಿಸಲಿ ನೋಡೋಣಾ   ಚೆಲುವರಾಯಸ್ವಾಮಿ
Advertisement

ಬೆಂಗಳೂರು: ಮೊನ್ನೆಯಷ್ಟೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಜನತಾ ದರ್ಶನ ನಡೆಸಿದ್ದರು‌. ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗಿದ್ದಕ್ಕೆ ಸರ್ಕಾರದ ಮೇಲೆ ಕಿಡಿಕಾರಿದ್ದರು. ಇದೀಗ ಜನತಾ ದರ್ಶನದ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಅವರು ಆಕ್ರೋಶ ಹೊರ ಹಾಕಿದ್ದಾರೆ.

Advertisement
Advertisement

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಅವರಿಗೆ ಮಾರ್ಗದರ್ಶನ ನೀಡುವಷ್ಟು ದೊಡ್ಡವನಲ್ಲ. ರಾಜಕಾರಣ ಇಷ್ಟೊಂದು ಮಾಡುವುದು ಬೇಡ. ರಾಷ್ಟ್ರ ಇಷ್ಟೊಂದು ಕೆಲಸ ಕೊಟ್ಟಿದ್ದರು, ರಾಜ್ಯದಲ್ಯಾಕೆ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನನ್ನ ಜೊತೆಗೆ ಅಧಿಕಾರಿಗಳು ನಿಂತುಕೊಳ್ಳಬೇಕು ಎನ್ನುವುದು ತಪ್ಪು. ರಾಜಕಾರಣ ಮಾಡುವುದು ನನಗೂ ಗೊತ್ತಿದೆ. ಮೈಸೂರು ಹಾಗೂ ರಾಮನಗರ ಜಿಲ್ಲೆಯಿಂದಾನೂ ಜನ ಬಂದಿದ್ದರು. ಜನತಾ ದರ್ಶನ ಮಾಡುವಾಗ ಜನ ಬರುತ್ತಾರೆ. ತಪ್ಪೇನಿಲ್ಲ. ಹೆಚ್ಡಿಕೆ ಜನತಾ ದರ್ಶನಕ್ಕೆ 3 ಸಾವಿರ ಜನ ಬಂದಿದ್ದರು. ಕುಮಾರಸ್ವಾಮಿ ಅವರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಯೋಜನೆಗಳನ್ನು ಕೊಡಿಸಲಿ ನೋಡೋಣಾ ಎಂದಿದ್ದಾರೆ.

ಸಿಎಂ, ಶಾಸಕರು ಮಾಡುವ ಕೆಲಾವನ್ನು ಕುಮಾರಸ್ವಾಮಿ ಯಾಕೆ ಮಾಡುತ್ತಾರೆ. ಲೋಕಸಭೆ ಸದಸ್ಯರಿಗೆ ಆಸಕ್ತಿ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಭೆ ನಡೆಸಿ ಮಾಹಿತಿ ಪಡೆಯಲಿ ಕೇಂದ್ರ ಸಚಿವ ಕುಮಾರಸ್ವಾಮಿ ಜೊತೆಯೂ ನಾನು ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿ ನನಗೆ ಟಾಂಗ್ ಕೊಡಲು ಏನು ಬೇಕಾದರೂ ಮಾಡಲಿ. ನಮ್ಮಪ್ಪ ಮಾಜಿ ಪ್ರಧಾನಿ ಅಲ್ಲವಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಜನತಾ ದರ್ಶನ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರಲ್ಲಿ ವಿರೋಧವಿದೆ. ಜನತಾ ದರ್ಶನವನ್ನು ರಾಜ್ಯ ಸರ್ಕಾರದಲ್ಲಿ ಮಾಡಬೇಕು ಎಂದಿದ್ದಾರೆ.

Advertisement
Advertisement

Tags :
Advertisement