ಅಯೋಧ್ಯೆಗೆ ಒಂದೇ ದಿನ ಹರಿದು ಬಂತು 3 ಲಕ್ಷ ಭಕ್ತ ಸಾಗರ..!
ಬಾಲರಾಮನನ್ನು ಕಾಣುವ ಉತ್ಸುಕ.. ಬಾಲರಾಮನ ಕಣ್ತುಂಬಿಕೊಳ್ಳುವ ಕೌತುಕ. ರಾಮಲಲ್ಲಾ ಪ್ರತಿಮೆಗೆ ಪ್ರಾಣ ಪ್ರತಿಷ್ಠಾಪನೆಯಾಗಿ ಎರಡು ದಿನ ಕಳೆದಿದೆ. ಅಬ್ಬಬ್ಬಾ ದಿನೇ ದಿನೇ ಅದೆಷ್ಟು ಲಕ್ಷ ಜನ ಅಯೋಧ್ಯೆಗೆ ಬರುತ್ತಿರುವುದು. ನೋಡುವುದಕ್ಕೆ ಎರಡು ಕಣ್ಣು ಸಾಲದು. ನಿನ್ನೆ ಒಂದೇ ದಿನ ಮೂರು ಲಕ್ಷ ಭಕ್ತರು ರಾಮನ ದರ್ಶನ ಪಡೆದಿದ್ದಾರೆ.
ರಾಮನನ್ನು ಕಾಣಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತಚತಾರೆ ಎಂಬ ನಿರೀಕ್ಷೆ ಇತ್ತು. ಪೂಜೆಗೆ ಸಮಯವನ್ನು ನಿಗಧಿ ಮಾಡಲಾಗಿತ್ತು. ಆದರೆ ಆ ಅಮಯವನ್ನು ಮೀರಿ ಜನ ದರ್ಶನಕ್ಕೆ ಬರುತ್ತಿದ್ದಾರೆ. ಉದ್ಘಾಟನೆಯಾದ ಮರುದಿನ ಅಂದರೆ ನಿನ್ನೆಯಿಂದ ರಾಮಲಲ್ಲಾ ದರ್ಶನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ನಾ ಮುಂದು ತಾ ಮುಂದು ಅಂತ ಜನ ನುಗ್ಗುತ್ತಿದ್ದಾರೆ. ರಾಮನ ಆಶೀರ್ವಾದಕ್ಕೆ ಪಾತ್ರರಾಗುತ್ತಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಕನಸು ನಿನ್ನೆ ಮೊನ್ನೆಯದ್ದಲ್ಲ. ಐನೂರು ವರ್ಷಗಳ ಸತತ ಹೋರಾಟವಿದೆ. ಈ ಹೋರಾಟಗಳ ನಡುವೆ ಅಯೋಧ್ಯೆಯ ರಾಮಜನ್ಮ ಭೂಮಿ ನಮ್ಮದಾಗಿದ್ದೇ ಅತ್ಯಂತ ಸಂತಸ ಎನ್ನುತ್ತಿದ್ದಾರೆ ಹಿಂದೂಗಳು. ಹೀಗಾಗಿ ಸಂಭ್ರಮದ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೇನೆ ಇಡೀ ದೇಶದ ಹಿಂದೂಗಳು ತುದಿಗಾಲಿನಲ್ಲಿ ನಿಂತಿದ್ದರು. ಆ ಗಳಿಗೆ ಕಡೆಗೂ ಬಂದಾಗಿದೆ. ಆ ಕನಸು ನನಸಾಗಿದೆ. ಹೀಗಾಗಿ ರಾಮಲಲ್ಲಾನ ದರ್ಶನ ಪಡೆಯುವುದಕ್ಕೆ ದಿನಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಬಾಲರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.