240 ಹೊಸದಾಗಿ ದಾಖಲಾದ ಕೊರೊನಾ ಕೇಸ್ : ಒಂದು ಸಾವು
ಬೆಂಗಳೂರು: ಆರೋಗ್ಯ ಇಲಾಖೆ ಪ್ರತಿದಿನ ನಡೆಸುವ ಪರೀಕ್ಷೆಯಲ್ಲಿ ಇಂದು 240 ಹೊಸ ಕೇಸ್ ದಾಖಲಾಗಿವೆ. ಈ ಮೂಲಕ 993 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.
ಕಳೆದ 24 ಗಂಟೆಯಲ್ಲಿ 6223 RTPCR ಟೆಸ್ಟ್ ಮಾಡಲಾಗಿದ್ದು, 792 RAT ಟೆಸ್ಟ್ ಮಾಡಲಾಗಿದೆ. ಎಲ್ಲಾ ಸೇರಿ 7015 ಜನರಿಗೆ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 240 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಪಾಸಿಟಿವ್ ರೇಟ್ ಕೂಡ 3.42 ಇದೆ. 937 ಜನ ಹೋಂ ಐಸೋಲೇಷನ್ ಇದ್ದರೆ, 8 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾದಿಂದಾಗಿ ಒಂದು ಸಾವಾಗಿದ್ದು, 220 ಜನ ಡಿಸ್ಚಾರ್ಜ್ ಆಗಿದ್ದಾರೆ.
ಈ ಮೊದಲೆಲ್ಲಾ ಕೊರೊನಾ ಬಂದಿದೆ ಎಂದರೆ ಜನ ಮೂರು ಮಾರು ದೂರ ಓಡುತ್ತಿದ್ದರು. ಅದರಲ್ಲೂ ಕೊರೊನಾದಿಂದ ಸಾವನ್ನಪ್ಪಿದರೆ ಅವರ ಅಂತ್ಯಕ್ರಿಯೆ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಬಾರಿ ಕೊರೊನಾದಿಂದ ಸಾವನ್ನಪ್ಪಿದವರಿಗೆ ಅಂತ್ಯಕ್ರಿಯೆ ನಡೆಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಸ್ಮಶಾನ, ರುದ್ರಭೂಮಿ, ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲು ಸೂಚನೆ ನೀಡಿದೆ. ಆದರೆ ಅದರ ಜೊತೆಗೆ ಸುರಕ್ಷತೆಯನ್ನು ತೆಗೆದುಕೊಳ್ಳಲು ಆದೇಶಿಸಿದೆ. ಮಾಸ್ಕ್, ಗ್ಲೌಸ್, ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ಮಾಡಲು ತಿಳಿಸಿದೆ. ಈ ಸಂಬಂಧ ಬಿಬಿಎಂಪಿ ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯದಲ್ಲಿ ಈಗಾಗಲೇ ಕೊರೊನಾದಿಂದಾಗಿ 26 ಮಂದಿ ಸಾವನ್ನಪ್ಪಿದ್ದಾರೆ. ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣ ದಾಖಲಾಗುತ್ತಲೆ ಇದೆ. ಇದರ ಜೊತೆಗೆ ದಿನಕ್ಕೆ ಒಬ್ಬರು, ಇಬ್ಬರಂತೆ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಜನ ಕೂಡ ಎಚ್ಚರಿಕೆಯಿಂದ ಇದ್ದು, ಸುರಕ್ಷತೆಯನ್ನ ತೆಗೆದುಕೊಳ್ಳಬೇಕಾಗಿದೆ.