Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

2 ಕ್ಷೇತ್ರಕ್ಕೆ ಇಷ್ಟೆಲ್ಲಾ ಪ್ರಯತ್ನ, ಹೊಂದಾಣಿಕೆ ಬೇಕಿತ್ತಾ..? ಬಿಜೆಪಿ ಮೇಲೆ ಬೇಸರ ಮಾಡಿಕೊಂಡರಾ ಕುಮಾರಸ್ವಾಮಿ..?

08:17 PM Mar 18, 2024 IST | suddionenews
Advertisement

ಬೆಂಗಳೂರು: ಲೋಕಸಭಾ ಚುನಾವಣೆಯ ದಿನಾಂಕವೂ ಅನೌನ್ಸ್ ಆಗಿದೆ. ಅತ್ತ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯೂ ರಿಲೀಸ್ ಆಗಿದೆ. ಒತ್ತ ಕಾಂಗ್ರೆಸ್ ಕೂಡ ಅಭ್ಯರ್ಥಿಗಳನ್ನು ಅನೌನ್ಸ್ ಮಾಡಿದೆ. ಆದರೆ ಜೆಡಿಎಸ್ ಪಕ್ಷ ಮಾತ್ರ ಅಡ್ಡಕತ್ತರಿಯಲ್ಲಿ ಸಿಕ್ಕಿದೆ. ಕೇಳಿರುವುದೇ ಮೂರು ಕ್ಷೇತ್ರಗಳು. ಅದರಲ್ಲೂ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವಂತ ಕ್ಷೇತ್ರಗಳನ್ನು ಮಾತ್ರ ಕೇಳಿದೆ‌. ಆದರೆ ಇನ್ನೂ ಕ್ಷೇತ್ರ ಅನೌನ್ಸ್ ಆಗಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರು ಇಂದು ಬಿಜೆಪಿ ಮೇಲೆ ಬೇಸರ ಹೊರ ಹಾಕಿದ್ದಾರೆ.

Advertisement

'ನಮ್ಮ‌ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲ. ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕುತ್ತೇವೆ. ಸೀಟು ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗುವ ತನಕ ಏನು ಮಾತನಾಡುವುದಿಲ್ಲ. ಆದರೆ ಅಭ್ಯರ್ಥಿಗಳ ಘೋಷಣೆ ಹಾಗೂ ಕ್ಷೇತ್ರಗಳ ಘೋಷಣೆ ತಡವಾಗುತ್ತಿದೆ ಎಂದು ನಮ್ಮ‌ ಪಕ್ಷದ ನಾಯಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಾವೂ ಬಿಜೆಪಿಯಿಂದ 6-7 ಸೀಟು ಕೇಳಿಲ್ಲ. ಕೇಳಿರುವುದೇ ಮೂರು ನಾಲ್ಕು ಸೀಟು. ನಮ್ಮ ಶಕ್ತಿ ಅವರಿಗೂ ತಿಳಿದಿದೆ. ಹೀಗಾಗಿ ನಾವೂ ಕೇಳಿರುವ ಸೀಟುಗಳನ್ನು ನೀಡಿತ್ತಾರೆ ಎಂಬ ನಂಬಿಕೆ ಇದೆ. ಕೇವಲ ಎರಡು ಕ್ಷೇತ್ರಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಒಷ್ಟು ಪ್ರುತ್ನ ಪಟ್ಟಿದ್ದಲ್ಲ, ಇಷ್ಟೊಂದು ಹೊಂದಾಣಿಕೆ ಮಾಡಿಕೊಂಡಿದ್ದಲ್ಲ. ಹಾಸನ, ಮಂಡ್ಯದಲ್ಲಿ ನಮ್ಮ‌ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುತ್ತಾರೆ. ತ್ರಿಕೋನ ಸ್ಪರ್ಧೆ ಆದರೆ ಸುಲಭವಾಗಿ ನಾವು ಗೆಲ್ಲುತ್ತೇವೆ. ಆದರೆ 18 ಕ್ಷೇತ್ರಗಳಲ್ಲಿ ಬಿಜೆಪಿಗೆ ನಮ್ಮ ಪಕ್ಷದಿಂದ ಅನುಕೂಲ ಆಗಲಿದೆ. ಈ ವಿಷಯವನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ನಮ್ಮ ಶಕ್ತಿ ಧಾರೆ ಎರೆದರೆ ಬಿಜೆಪಿಗೆ ಒಳ್ಳೆಯ ಫಲಿತಾಂಶ ಬರುತ್ತದೆ ಎಂದಿದ್ದಾರೆ.

Advertisement

Advertisement
Tags :
2 ಕ್ಷೇತ್ರbangaloreBjphd kumara swamyKumaraswamyಎಚ್ ಡಿ ಕುಮಾರಸ್ವಾಮಿಬಿಜೆಪಿಬೆಂಗಳೂರು
Advertisement
Next Article