Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

09:46 PM Apr 26, 2024 IST | suddionenews
Advertisement

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ ಸಲ ಚುನಾವಣೆ ಬಂದಾಗಲೂ ಮತದಾನದ ಜಾಗೃತಿ ಮೂಡಿಸಲಾಗುತ್ತದೆ. ಆದರೂ ಜನ ಅರಿತುಕೊಳ್ಳುತ್ತಿಲ್ಲ. ಇಂದು ಮತದಾನದ ಮುಕ್ತಾಯದ ಹೊತ್ತಿಗೆ 63.90% ಮಾತ್ರ ಮತದಾನವಾಗಿದೆ.

Advertisement

 

ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆ ಎಂಬ ಕುಗ್ರಾಮದಲ್ಲಿ ನೂರಕ್ಕೆ‌ ನೂರು ಮತದಾನ ಮಾಡಲಾಗಿದೆ. ಕುಗ್ರಾಮದಲ್ಲಿರುವ 111 ಮತದಾರರೂ ತಮ್ಮ ಹಕ್ಕು ಚಲಾಯಿಸುವಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಷ್ಟಾಗಿ ಸೌಕರ್ಯವೇ ಇಲ್ಲದ ಗ್ರಾಮದಲ್ಲಿ ಪ್ರತಿಯೊಬ್ಬರು ಬಂದು ಮತದಾನ ಮಾಡಿದ್ದಾರೆ. ಇದನ್ನು ನೋಡಿ ಎಲ್ಲರು ಕಲಿಯಬೇಕಾದದ್ದೆ.

Advertisement

ಉಳಿದಂತೆ ಎಲ್ಲೆಲ್ಲಿ ಎಷ್ಟು ಮತದಾನವಾಗಿದೆ ಎಂಬ ಮಾಹಿತಿ ಕೆಳಕಂಡಂತಿದೆ:

ಬೆಂಗಳೂರು ಕೇಂದ್ರ 48.61%
ಬೆಂಗಳೂರು ಉತ್ತರ – 50.04%
ಬೆಂಗಳೂರು ಗ್ರಾಮಾಂತರ 61.78%
ಬೆಂಗಳೂರು ದಕ್ಷಿಣ – 49.37%
ಚಾಮರಾಜನಗರ – 69.60%
ಚಿಕ್ಕಬಳ್ಳಾಪುರ – 70.97%
ಚಿತ್ರದುರ್ಗ – 67.00%
ದಕ್ಷಿಣ ಕನ್ನಡ – 71.83%
ಹಾಸನ – 72.13 %
ಕೋಲಾರ – 71.26%
ಮಂಡ್ಯ – 74.87%
ಮೈಸೂರು – 65.85 %
ತುಮಕೂರು – 72.10%
ಉಡುಪಿ, ಚಿಕ್ಕಮಗಳೂರು – 72.13%
ಮಂಡ್ಯ - 74.87%
ಬೆಂ. ಕೇಂದ್ರ - 48.61%ರಷ್ಟು ಮತದಾನವಾಗಿದೆ.

Advertisement
Tags :
100% voting100% ಮತದಾನBeltangadibengaluruchitradurgaelection votingsuddionesuddione newsvillageಕುಗ್ರಾಮಚಿತ್ರದುರ್ಗಬೆಂಗಳೂರುಬೆಳ್ತಂಗಡಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article