ಮೊದಲು ತಂದೆಯವರ ಕಾರ್ಯ.. ಆಮೇಲೆ ರಾಜಕೀಯ : ದರ್ಶನ್ ಧ್ರುವನಾರಾಯಣ್
ಮೈಸೂರು: ಧ್ರುವನಾರಾಯಣ್ ನಿಧನವಾದ ಮೇಲೆ ಅವರಮಗನಿಗೆ ಟಿಕೆಟ್ ನೀಡಲೇಬೇಕೆಂದು ಕಾರ್ಯಕರ್ತರು ಒತ್ತಾಯ ಮಾಡಿದರು. ಅಷ್ಟೇ ಅಲ್ಲದೆ, ನಂಜನಗೂಡು ಕ್ಷೇತ್ರವನ್ನು ಬಿಟ್ಟುಕೊಡುವಂತೆ ಹೆಚ್ ಸಿ ಮಹದೇವಪ್ಪ ಅವರಿಗೆ ಮನವಿ ಕೂಡ ಮಾಡಿದರು. ಆ ಮನವಿಯನ್ನು ಒಪ್ಪಿದ ಮಹದೇವಪ್ಪ ಅವರು, ದರ್ಶನ್ ಗಾಗಿ ನಂಜನಗೂಡು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ.
ಧ್ರುವ ನಾರಾಯಣ್ ಅವರ ಸರಳತೆ, ಮುಗ್ಧತೆಯನ್ನು ಯಾರು ಭರಿಸುವುದಕ್ಕೆ ಆಗಲ್ಲ. ಆದ್ರೆ ತಂದೆಯ ಸ್ಥಾನದಲ್ಲಿ ಈಗ ಮಗನನ್ನು ನೋಡಲು ಕಾರ್ಯಕರ್ತರು ಬಯಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ದರ್ಶನ್ ಧ್ರುವನಾರಾಯಣ್, ಗುರು ಹಿರಿಯರು, ನಂಜನಗೂಡು ಜನತೆ ಏನು ಹೇಳ್ತಾರೆ ಅದನ್ನು ಪಾಲನೆ ಮಾಡ್ತೀನಿ, ಅದರಂತೆ ನಡೆಯುತ್ತೀನಿ. ಆದ್ರೆ ಸದ್ಯಕ್ಕೆ ನನ್ನ ಮೊದಲ ಆದ್ಯತೆ ತಂದೆಯವ ಕಾರ್ಯ ಮಾಡಬೇಕು ಎಂದಿದ್ದಾರೆ.
ಸದ್ಯ ರಾಜಕೀಯದ ಬಗ್ಗೆ ನಾನು ಏನನ್ನು ಯೋಚನೆ ಮಾಡಿಲ್ಲ. ತಂದೆಯವರ ಕಾರ್ಯ ಮುಗಿದ ಬಳಿಕ ನಿರ್ಧಾರ ಮಾಡುವೆ. ನನ್ನ ಬಳಿ ತಂದೆಯವರು ರಾಜಕಾರಣದ ಬಗ್ಗೆ ಮಾತನಾಡುತ್ತಿರಲಿಲ್ಲ. ಹೀಗಾಗಿ ನನಗೆ ರಾಜಕೀಯದ ಬಗ್ಗೆ ಏನು ಗೊತ್ತಿಲ್ಲ. ನಾನು ಎಲ್ಎಲ್ಬಿ ಸೇರಿದಾಗ ಖುಷಿಪಟ್ಟರು. ನನ್ನದು ಹಾಗೂ ನನ್ನ ತಮ್ಮನದ್ದು ಸ್ವತಂತ್ರ್ಯ ಆಯ್ಕೆಯಾಗಿತ್ತು. ಅಪ್ಪ ನಿಧನದ ದಿನ ನಾನು ಬೆಂಗಳೂರಿನಲ್ಲಿ ಇದ್ದೆ. ಹಿಂದಿನ ದಿನ ಮಾತನಾಡಿ, ಚುನಾವಣಾ ಪ್ರಚಾರಕ್ಕೆ ವಾಹನ ರೆಡಿ ಮಾಡಲು ಹೇಳಿದ್ದರು. ತಂದೆಯವರು ರಾಜಕಾರಣಕ್ಕೆ ನನ್ನನ್ನು ಯಾವತ್ತೂ ಕರೆದಿಲ್ಲ ಎಂದಿದ್ದಾರೆ.