ಡಿಕೆಶಿ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ನಾಯಕರು : ವಿಜಯೇಂದ್ರ ಏನಂದ್ರು..!
ಬೆಳಗಾವಿ: ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಡಿನ್ನರ್ ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ಈ ಪಾರ್ಟಿ ಮಾಡಿದ್ದು, ವಿಶೇಷವಲ್ಲದೆ ಇದ್ದರು, ಇದರಲ್ಲಿ ಭಾಗವಹಿಸಿದ ವ್ಯಕ್ತಿಗಳ ವಿಚಾರಕ್ಕೆ ಇದು ಸ್ಪೆಷಲ್ ಅಂತ ಅನ್ನಿಸಿತ್ತು. ಬಿಜೆಪಿಯ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್, ಹೆಚ್ ವಿಶ್ವನಾಥ್ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದು ಬಿಜೆಪಿಯಲ್ಲಿ ಹಲವು ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ. ಇದೊಂದು ಗಂಭೀರವಾದ ವಿಚಾರ ಎಂದೇ ಪರಿಗಣಿಸಲಾಗುತ್ತಿದೆ.
ಬಿವೈ ವಿಜಯೇಂದ್ರ ಅವರು ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅದಾದ ಮೇಲೆ ಪಕ್ಷ ಸಂಘಟನೆ, ಅಸಮಾಧಾನಗೊಂಡ ಹಿರಿಯರ ಮನವೊಲಿಕೆಯ ಕಡೆಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಇದೀಗ ಡಿಕೆಶಿ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದು ವಿಜಯೇಂದ್ರ ಅವರ ಗಮನಕ್ಕೂ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿವೈ ವಿಜಯೇಂದ್ರ ಅವರು, ಈ ಮೂವರ ಬಗ್ಗೆ ಬೆಳಗ್ಗೆ ಮಾಹಿತಿ ಸಿಕ್ಕಿದೆ. ಅವರನ್ನು ಕರೆದು ಮಾತನಾಡಿ, ಸ್ಪಷ್ಟೀಕರಣ ಕೇಳುತ್ತೇನೆ. ಇದು ನಿಜಕ್ಕೂ ಗಂಭೀರವಾದ ವಿಚಾರ. ಕರೆದು ಮಾತನಾಡುತ್ತೇನೆ ಎಂದಿದ್ದಾರೆ.
ಈಗಾಗಲೇ ಹೆಚ್ ವಿಶ್ವನಾಥ್, ಬಿಜೆಪಿಯಲ್ಲಿನ ಅಸಮಾಧಾನದ ಬಗ್ಗೆ ಮಾತನಾಡಿ, ಸುದ್ದಿಯಾಗಿದ್ದಾರೆ. ಇನ್ನು ಎಸ್ ಟಿ ಸೋಮಶೇಖರ್ ಕೂಡ ಕಾಂಗ್ರೆಸ್ ನತ್ತ ವಾಲುತ್ತಿದ್ದಾರೆ. ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಸೇರುವುದನ್ನು ಖಚಿತ ಎನ್ನಲಾಗಿತ್ತು. ಇದರ ನಡುವೆ ಇಂಥದ್ದೊಂದು ಬೆಳವಣಿಗೆ ನಡೆದಿದೆ. ಹಿರಿಯರ ಮನವೊಲಿಕೆ ಮಾಡುವ ಹಾದಿಯಲ್ಲಿರುವ ವಿಜಯೇಂದ್ರ ಅವರು ಈ ಮೂವರ ಮನವೊಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.