Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗಲಾಟೆ ಮಾಡುವಾಗ ರೇಪ್ ಮಾಡಿದ್ದಾರೆಂದು ದೂರು ಕೊಟ್ಟಿದ್ದಾರೆ : ಹಾವೇರಿ ನೈತಿಕ ಪೊಲೀಸ್ ಗಿರಿ ಬಗ್ಗೆ ಸಚಿವ ಪರಮೇಶ್ವರ್ ಪ್ರತಿಕ್ರಿಯೆ

12:16 PM Jan 12, 2024 IST | suddionenews
Advertisement

 

Advertisement

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ಗೆಲ್ಲುವುದಕ್ಕೆ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿ ಮಾಡಿ ಎಂದು, ಕಾಂಗ್ರೆಸ್ ನಾಯಕರು ಬೇಡಿಕೆ ಇಟ್ಟಿದ್ದಾರೆ. ಇದು ಕಾಂಗ್ರೆಸ್ ನಲ್ಲಿ ಪರ - ವಿರೋಧಕ್ಕೆ ನಾಂದಿ ಹಾಡಿತ್ತು. ಇದೀಗ ಹೈಕಮಾಂಡ್ ನಿಂದ ಈ ಸಂಬಂಧ ಸ್ಪಷ್ಟ ಉತ್ತರ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಜಿ ಪರಮೇಶ್ವರ್, ಆ ರೀತಿ ಏನು ಇಲ್ಲ. ಎಐಸಿಸಿ ಅಧ್ಯಕ್ಷರೇ ಸೂಚನೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಂತದ್ದು ಯಾವುದನ್ನು ಮಾಡುವುದಕ್ಕೆ ಆಗಲ್ಲ ಅಂತ ಹೇಳಿದ್ದಾರೆ.

 

Advertisement

ಇನ್ನು ಹಾವೇರಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಬಗ್ಗೆ ಮಾತನಾಡಿ, ಆ ಬಗ್ಗೆ ತನಿಳೆ ನಡೆಯುತ್ತಿದೆ. ಈ ಕೇಸ್ ಗೆ ಸಂಬಂಧಿಸಿದಂತೆ ಮೊದಲೇ ಅವರು ದೂರು ಕೊಟ್ಟಿಲ್ಲ. ಆಮೇಲೆ ದೂರು ಕೊಟ್ಟಿದ್ದಾರೆ. ಅವರನ್ನು ಈಗಾಗಲೇ ಅರೆಸ್ಟ್ ಕೂಡ ಮಾಡಿದ್ದಾರೆ. ತನಿಖೆ ನಡೆಯುತ್ತಿದೆ. ದೂರು ಕೊಟ್ಟಿರುವುದು ನಿಜವಾ..? ಸುಳ್ಳಾ ಎಂಬುದನ್ನು ನೋಡಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

 

ಸಚಿವ ಜಿ ಪರಮೇಶ್ವರ್ ಮಾತು ಮುಂದುವರೆಸಿದ್ದು, ಶಿರಸಿಯಿಂದ ಬಂದು ಅಲ್ಲಿ ರೂಮ್ ಮಾಡಿದ್ದರು. ಬೇರೆಯವರ ಜೊತೆಗೆ ಅನೈತಿಕವಾಗಿ ಇದ್ದರು ಎಂದು ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡುವಾಗಲೇ ನಮ್ಮ ಮೇಲೆ ರೇಪ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಮೆಡಿಕಲ್ ಟೆಸ್ಟ್ ಕೂಡ ಮಾಡಿಸಲಾಗಿದೆ. ಇಂಥ ಕೇಸ್ ಗಳ ಮೇಲೆ ನಿರ್ಲಕ್ಷ್ಯ ಮಾಡಲ್ಲ. ಈಗಾಗಲೇ ವಿಚಾರಣೆ ನಡೆಯುತ್ತಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

Advertisement
Tags :
ಗಲಾಟೆನೈತಿಕ ಪೊಲೀಸ್ ಗಿರಿಪ್ರತಿಕ್ರಿಯೆಸಚಿವ ಪರಮೇಶ್ವರ್ಸುದ್ದಿಒನ್ಹಾವೇರಿ
Advertisement
Next Article