For the best experience, open
https://m.suddione.com
on your mobile browser.
Advertisement

ಹಣ್ಣು ಕೊಟ್ಟು ಲೈಂಗಿಕ ದೌರ್ಜನ್ಯ ಮಾಡಿದ್ರಂತೆ ರೇವಣ್ಣ : ತಂದೆ-ಮಗನ ವಿರುದ್ಧ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಏನಿದೆ..?

10:05 PM Aug 23, 2024 IST | suddionenews
ಹಣ್ಣು ಕೊಟ್ಟು ಲೈಂಗಿಕ ದೌರ್ಜನ್ಯ ಮಾಡಿದ್ರಂತೆ ರೇವಣ್ಣ   ತಂದೆ ಮಗನ ವಿರುದ್ಧ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಏನಿದೆ
Advertisement

Advertisement
Advertisement

ಬೆಂಗಳೂರು: ಲೈಂಗಿಕ ದೌರ್ಜನ್ಯದ ಕೇಸಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜೈಲಿಗೆ ಹೋಗಿ ಬಂದಿದ್ದಾರೆ. ಪ್ರಜ್ಚಲ್ ರೇವಣ್ಣ ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಈ ಪ್ರಕರಣವನ್ನು ಎಸ್ಐಟಿ ಅಧಿಕಾರಿಗಳು ನಡೆಸುತ್ತಿದ್ದು, ಈಗ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ನಲ್ಲಿ ರೇವಣ್ಣನಿಗೂ ಸಂಕಷ್ಟ ಎದುರಾಗುವಂತ ವಿಷಯಗಳನ್ನು ಉಲ್ಲೇಖ ಮಾಡಲಾಗಿದೆ.

Advertisement
Advertisement

ಎಸ್ಐಟಿ ಅಧಿಕಾರಿಗಳು ಸಲ್ಲಿಕೆ ಮಾಡಿರುವ ಚಾರ್ಜ್ ಶೀಟ್ ನಲ್ಲಿ ಹೆಚ್.ಡಿ.ರೇವಣ್ಣ ಅವರು ಸಂತ್ರಸ್ತೆಗೆ ಹಣ್ಣು ಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳುತ್ತಿದ್ದರಂತೆ. ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಹಣ್ಣು ಕೊಡಲು ಹೋಗಿ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುವುದು ಉಲ್ಲೇಖವಾಗಿದೆ. ಇನ್ನು ಅವರ ಪುತ್ರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಕೂಡ ಲೈಂಗಿಕ ದೌರ್ಜನ್ಯ ಎಸಗಿರುವುದು ಉಲ್ಲೇಖವಾಗಿದೆ.

ಮನೆಯಲ್ಲಿ ತಾಯಿ ಇಲ್ಲದೆ ಇರುವಾಗ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿರುವುದು ಉಲ್ಲೇಖವಾಗಿದೆ. ಹಾಸನ ಮತ್ತು ಬೆಂಗಳೂರು ನಿವಾಸದಲ್ಲಿ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅದರಲ್ಲೂ ಬಸವನಗುಡಿಯ ಮನೆಯಲ್ಲಿ ಸಂತ್ರಸ್ತೆಯನ್ನು ರೂಮಿನೊಳಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಇವತ್ತು ಒಂಟಿಯಾಗಿ ಸಿಕ್ಕಿದ್ದೀಯಾ. ನಾನು ಹೇಳಿದಂತೆ ಕೇಳದೆ ಹೋದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕುತ್ತಿದ್ದರಂತೆ. ಸಂತ್ರಸ್ತೆ ಎಷ್ಟೇ ಬೇಡಿಕೊಂಡರು ಬಿಡದೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಮೊಬೈಲ್ ವಿಡಿಯೋ ಮಾಡಿಕೊಂಡಿದ್ದ ಪ್ರಜ್ವಲ್ ದೇವರಾಜ್, ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ಗಂಡನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರಂತೆ.

Advertisement
Tags :
Advertisement