For the best experience, open
https://m.suddione.com
on your mobile browser.
Advertisement

ದರ್ಶನ್ ಜೈಲಲ್ಲಿ ಹೇಗಿದ್ದಾರೆ..? ಭೇಟಿ ಬಳಿಕ ರಚಿತಾ ರಾಮ್ ಹೇಳಿದ್ದೇನು..?

06:56 PM Aug 22, 2024 IST | suddionenews
ದರ್ಶನ್ ಜೈಲಲ್ಲಿ ಹೇಗಿದ್ದಾರೆ    ಭೇಟಿ ಬಳಿಕ ರಚಿತಾ ರಾಮ್ ಹೇಳಿದ್ದೇನು
Advertisement

Advertisement
Advertisement

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ 70 ದಿನಗಳ ಮೇಲಾಗಿದೆ. ಪೊಲೀಸರು ಕೂಡ ಇನ್ನು ಚಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಹೀಗಾಗಿ ದರ್ಶನ್ ಪರ ವಕೀಲರು ಜಾಮೀನಿಗೂ ಅರ್ಜಿ ಹಾಕಿಲ್ಲ. ಇನ್ನು ಪೊಕೀಸರು ಸಾಕ್ಷ್ಯಗಳನ್ನು ಕಲೆ ಹಾರುತ್ತಿರುವ ರೀತಿ ನೋಡಿದರೆ ದರ್ಶನ್ ಅವರು ಹೊರಗೆ ಬರುವುದೇ ಅನುಮಾನ ಎಂದೇ ಹಲವರು ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಇಂದು ನಟಿ ರಚಿತಾ ರಾಮ್ ದರ್ಶನ್ ಅವರನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು.

ದರ್ಶನ್ ಅವರನ್ನು ಭೇಟಿಯಾದ ರಚಿತಾ ರಾಮ್ ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ. ಸಹಜವಾಗಿಯೇ ನೆಚ್ಚಿನ ನಟನನ್ನು ಆ ಸ್ಥಿತಿಯಲ್ಲಿ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ರಚಿತಾ ರಾಮ್ ಕೂಡ ಅಪ್ಸೆಟ್ ಆಗಿದ್ದರಂತೆ. ಆದರೆ ದರ್ಶನ್ ಅವರೇ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

Advertisement
Advertisement

ದರ್ಶನ್ ಭೇಟಿ ಬಳಿಕ ಮಾತನಾಡಿದ ರಚಿತಾ ರಾಮ್, ರಾಜನನ್ನ ರಾಜನ ರೀತಿಯಲ್ಲಿಯೇ ನೋಡುವುದಕ್ಕೆ ನನಗೆ ಇಷ್ಟ. ಈ ರೀತಿಯಲ್ಲಿ ನೋಡುವುದಕ್ಕೆ ಕಷ್ಟ ಆಯ್ತು. ನಾನು ಅವರ ಬ್ಯಾನರ್ ನಿಂದಾನೇ ಪರಿಚಯ ಆಗಿದ್ದು. ಅವರು ನನಗೆ ಅವಕಾಶ ಕೊಡಲು ನೋ ಎಂದಿದ್ದರೆ ಖಂಡಿತಾ ಬಿಂದ್ಯಾ ರಚಿತಾ ರಾಮ್ ಆಗ್ತಾ ಇರಲಿಲ್ಲ. ಅವರನ್ನು ನೋಡಿದ ಕೂಡಲೇ ಭಾವುಕಳಾದೆ. ಆದರೆ ಅವರೇ ನಮಗೆ ಧೈರ್ಯ ಹೇಳಿದರು. ಸಮಾಧಾನ ಮಾಡಿದ್ರು. ಕಾನೂನಿನಲ್ಲಿ ನಮಗೆ ನಂಬಿಕೆ ಇದೆ. ಆದಷ್ಟು ಬೇಗ ಹೊರಗೆ ಬರ್ತೀನಿ ಅಂತ ಅವರು ಹೇಳಿದ್ದಾರೆ. ನಾನು ಕೂಡ ನಿಮಗೋಸ್ಕರ ನಾವೆಲ್ಲಾ ಕಾಯ್ತಾ ಇದ್ದೀವಿ. ಬೇಗ ಬನ್ನಿ ಎಂದಿದ್ದೇನೆ ಅಂತ ರಚಿತಾ ರಾಮ್ ಮಾಹಿತಿ ನೀಡಿದ್ದಾರೆ.

Advertisement
Tags :
Advertisement