For the best experience, open
https://m.suddione.com
on your mobile browser.
Advertisement

ದರ್ಶನ್ ಆಯ್ತು.. ಈಗ ಧ್ರುವ ಸರ್ಜಾ ಆಪ್ತನ ಬಂಧನ.. ಕಾರಣವೇನು ಗೊತ್ತಾ..?

03:39 PM Sep 10, 2024 IST | suddionenews
ದರ್ಶನ್ ಆಯ್ತು   ಈಗ ಧ್ರುವ ಸರ್ಜಾ ಆಪ್ತನ ಬಂಧನ   ಕಾರಣವೇನು ಗೊತ್ತಾ
Advertisement

Advertisement
Advertisement

ಬೆಂಗಳೂರು: ಅದ್ಯಾಕೋ ಏನೋ ಸೆಲೆಬ್ರೆಟಿಗಳ ಆಪ್ತರಿಗೆ ಪೊಲೀಸ್ ಸ್ಟೇಷನ್ ಅತಿಥಿ ಗೃಹವಾಗಿ ಬಿಟ್ಟಿದೆ. ಇಷ್ಟು ದಿನ ದರ್ಶನ್ ಗ್ಯಾಂಗ್ ಅರೆಸ್ಟ್ ಆಗಿದ್ದ ಸುದ್ದಿ ಆಯ್ತು. ಈಗ ಧ್ರುವ ಸರ್ಜಾ ಆಪ್ತ ಕೂಡ ಪೊಲೀಸರ ಬಂಧನಕ್ಕೆ ಸಿಕ್ಕಿದ್ದಾರೆ. ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಎಂಬಾತನ ಬಂಧನವಾಗಿದೆ.

ಜಿಮ್ ಟ್ರೇನರ್ ಪ್ರಶಾಂತ್ ಪೂಜಾರಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಧ್ರುವ ಸರ್ಜಾ ಆಪ್ತ ಅಶ್ವಿನ್ ನನ್ನು ಪೊಲೀಸರು ಬಂಧಿಸಿದ್ದಾರೆ‌. ಬನಶಂಕರಿ ನಗರದ ಪೊಲೀಸರು ಬಂಧಿಸಿದ್ದಾರೆ. ಜಿಮ್ ಟ್ರೇನರ್ ಮೇಲೆ ಹಲ್ಲೆ ನಡೆದಿದ್ದಕ್ಕೆ ಮೂಲ ಮಾಸ್ಟರ್ ಮೈಂಡ್ ಅಶ್ವಿನ್ ಎಂಬುದು ತಿಳಿದು ಬಂದಿದೆ ಎನ್ಮಲಾಗಿದೆ. ಹೀಗಾಗಿ ಆತನನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

Advertisement
Advertisement

ಅಷ್ಟಕ್ಕೂ ಏನಿದು ಪ್ರಕರಣ..?

ಕಳೆದ ಮೇ 26ರ ರಾತ್ರಿ ಧ್ರುವ ಸರ್ಜಾ ಜಿಮ್ ಟ್ರೇನರ್ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆಯಾಗಿತ್ತು. ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಪ್ರಶಾಂತ್ ಪೂಜಾರಿ, ಹರ್ಷ ಹಾಗೂ ಸುಭಾಷ್ ಎನ್ನುವವರಿಂದ ಹಲ್ಲೆ ನಡೆದಿತ್ತು. ವೈಯಕ್ತಿಕ ಕಾರಣದಿಂದ ನಾಗೇಂದ್ರ ಎಂಬಾತ ಹರ್ಷ ಹಾಗೂ ಸುಭಾಷ್ ಗೆ ಸುಫಾರಿ ಕೊಟ್ಟು ಹಲ್ಲೆ ಮಾಡಿಸಿದ್ದ ಎನ್ನಲಾಗಿದೆ. ಈ ನಾಗೇಂದ್ರ ಎಂಬಾತ ಕೆಲ ದಿನಗಳ ಹಿಂದೆ ಧ್ರುವ ಸರ್ಜಾ ಜೊತೆಗೆ ಕೆಲಸ ಮಾಡಿಕೊಂಡಿದ್ದ ಎಂಬ ಮಾಹಿತಿ ಇದೆ. ಈತನೇ ಜಿಮ್ ಟ್ರೇನರ್ ಮೇಲೆ ಹಲ್ಲೆ ಮಾಡಿದ್ದು, ಅದಕ್ಕೆ ಅಶ್ವಿನ್ ಬೆಂಬಲ ಕೂಡ ಇತ್ತು ಎನ್ನಲಾಗಿದೆ. ಧ್ರುವ ಸರ್ಜಾ ಜೊತೆಗೆ ಹೆಚ್ಚು ಆತ್ಮೀಯತೆ ಬೆಳೆಸಿಕಿಂಡಿದ್ದಕ್ಕೆ ಅಶ್ವಿನ್ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಹೀಗಾಗಿ ಹಲ್ಲೆಗೆ ಬೆಂಬಲ ನೀಡಿದ್ದರು ಎನ್ನಲಾಗಿದೆ.

Advertisement
Tags :
Advertisement