For the best experience, open
https://m.suddione.com
on your mobile browser.
Advertisement

ಗಡ್ಡ ಬೆಳೆಸಲು ಮಾತ್ರ ಸಾಧ್ಯ ಪ್ರಧಾನಿಯಾಗಲು ಅಲ್ಲ : ರಾಹುಲ್ ಗಾಂಧಿ ವಿರುದ್ಧ ಚೌಧರಿ ಗರಂ

08:58 PM Jun 10, 2023 IST | suddionenews
ಗಡ್ಡ ಬೆಳೆಸಲು ಮಾತ್ರ ಸಾಧ್ಯ ಪ್ರಧಾನಿಯಾಗಲು ಅಲ್ಲ   ರಾಹುಲ್ ಗಾಂಧಿ ವಿರುದ್ಧ ಚೌಧರಿ ಗರಂ
Advertisement

Advertisement
Advertisement

Advertisement

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷ ಸಂಘಟನೆಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿದ್ದರು. ಈ ವೇಳೆ ಗಡ್ಡದಾರಿಯಂತೆ ಕಾಣಿಸಲು ಶುರುವಾವಿತ್ತು. ಬಳಿಕ ಗಡ್ಡವನ್ನು ತೆಗೆದಿದ್ದಾರೆ. ಆದರೆ ಬಿಜೆಪಿ ನಾಯಕ ಸಾಮ್ರಾಟ್ ಚೌದರಿ, ರಾಹುಲ್ ಗಾಂಧಿಯವರನ್ನು ವ್ಯಂಗ್ಯ ಮಾಡಿದ್ದಾರೆ. ಒಸಮಾ ಬಿನ್ ಲಾಡೆನ್ ಗೆ ಹೋಲಿಕೆ ಮಾಡಿದ್ದಾರೆ.

Advertisement
Advertisement

ಬಿಹಾರದಲ್ಲಿ ಮಾತನಾಡಿದ ಚೌದರಿ, ಹತ್ಯೆಯಾದ ಆಲ್ ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ರೀತಿ ಗಡ್ಡ ಬೆಳೆಸಬಹುದೇ ವಿನಃ, ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ. ರಾಹುಲ್ ಗಾಂಧಿಯವರು ಒಸಮಾ ಬಿನ್ ಲಾಡೆನ್ ಥರ ಗಡ್ಡ ಬೆಳೆಸುತ್ತಾರೆ. ಅವರು ಮೋದಿಯವರಂತೆ ಪ್ರಧಾನಿಯಾಗುವ ಕನಸು ಕಾಣುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಗಡ್ಡ ಬಿಟ್ಟು ಎಲ್ಲರ ಎದುರು ಪ್ರದರ್ಶನ ನೀಡಿದ್ದಾರೆ. ಆಮೇಲೆ ತೆಗೆದಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.

Advertisement
Tags :
Advertisement