For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ಆಟೋ ಚಾಲಕರ ಅನಿರ್ಧಿಷ್ಟಾವಧಿ ಕಾಲ ಆಹೋರಾತ್ರಿ ಧರಣಿ ಯಾಕೆ‌ ?

03:32 PM Aug 28, 2023 IST | suddionenews
ಚಿತ್ರದುರ್ಗದಲ್ಲಿ ಆಟೋ ಚಾಲಕರ ಅನಿರ್ಧಿಷ್ಟಾವಧಿ ಕಾಲ ಆಹೋರಾತ್ರಿ ಧರಣಿ ಯಾಕೆ‌
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ(ಆ. 28) : ಆಟೋ ಚಾಲಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಕಾಲ ಇಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆಹೋರಾತ್ರಿ ಧರಣಿ ನಡೆಸಲಾಯಿತು.

Advertisement

ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ 20 ವರ್ಷಗಳಿಂದ ವಿವಿಧ ಆಟೋ ಸಂಘಟನೆಗಳು ಹೋರಾಟ ಮಾಡುತ್ತಾ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆದ ಕಾರಣ ಈ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ, ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅನಿರ್ಧಿಷ್ಟಕಾಲ ಆಹೋರಾತ್ರಿ ಧರಣಿ ನಡೆಸಲಾಗುತ್ತಿದೆ.

ಹೊಸದಾಗಿ ಬರುವಂತಹ ಆಟೋಗಳಿಗೆ ಆರ್.ಟಿ.ಓ. ಇಲಾಖೆ ಪರ್ಮಿಟ್ ನೀಡಬಾರದು ಚಿತ್ರದುರ್ಗ ಪರ್ಮಿಟ್ ಇಲ್ಲದೆ ಇರುವ ಔಟ್ ಪರ್ಮಿಟ್ ಆಟೋಗಳನ್ನು ಹಿಡಿದು ಹಾಕಬೇಕು.  ಆಟೋ, ಚಾಲಕರ ಸಂಘಟನೆಗಳು ನಿಗದಿ ಪಡಿಸಿರುವ ಸ್ಥಳಗಳಿಗೆ ಆಟೋ ನಿಲ್ದಾಣಗಳನ್ನು ಜಿಲ್ಲಾ ಆಡಳಿತ ಈ ಕೂಡಲೇ ನಿರ್ಮಿಸಿ ಕೊಡಬೇಕು.

ಆಟೋ ಚಾಲಕರಿಗಾಗಿಯೇ ಆಟೋ ಚಾಲಕರ ನಿಗಮ ಮಂಡಳಿ ರಚನೆಯಾಗಬೇಕು. ಹಳ್ಳಿಗಳಿಗೆ ಸೀಟು ಹೊಡೆಯುವ ಅಪ್ಪೆ ಆಟೋಗಳನ್ನು ಈ ಕೂಡಲೇ ನಗರದಿಂದ ಬಹಿಷ್ಕರಿಸಬೇಕು. ರಾಜ್ಯ ಸರ್ಕಾರದಿಂದ ಬರುವ ಆಶ್ರಯ ಮನೆ ಯೋಜನೆಯಡಿಯಲ್ಲಿ ನಿರ್ಗತಿಕ ಆಟೋ ಚಾಲಕರಿಗೆ ಆಶ್ರಯ ಮನೆ ನೀಡಬೇಕು.

ನಗರ ಸಾರಿಗೆ ಬಸ್ಸುಗಳಿಗೆ ನಿಗಧಿತ ಸಮಯ ಸ್ಥಳ ಈ ಕೂಡಲೇ ನಿಗಧಿಪಡಿಸಬೇಕು.  ಆಟೋ ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ ಸೌಲತ್ತುಗಳನ್ನು ನೀಡಬೇಕು ಎಂದು ಚಿತ್ರದುರ್ಗ ನಗರ ಆಟೋ ಸಂಘಟನೆಗಳ ಒಕ್ಕೂಟದವತಿಯಿಂದ ಆಗ್ರಹಿಸಲಾಯಿತು.

ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ವಹಿಸಿದ್ದರು. ಇದರಲ್ಲಿ ಕುಮಾರಸ್ವಾಮಿ, ವೆಂಕಟೇಶ್, ಸಿದ್ದು, ಅಮರೇಶ್, ಇಕ್ಬಾಲ್, ಆಸಿಫ್ ಸೇರಿದಂತೆ ಇತರರು ಭಾಗವಹಿಸಿದ್ದರು.

Tags :
Advertisement