Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಿಪಕ್ಷ ನಾಯಕನ ಆಯ್ಕೆ ಯಾವಾಗ..? ಕೆ ಎಸ್ ಈಶ್ವರಪ್ಪ ಹೇಳಿದ್ದೇನು..?

05:09 PM Jul 04, 2023 IST | suddionenews
Advertisement

 

Advertisement

ಸದನ ಶುರುವಾಗಿ ಎರಡನೇ ದಿನವಾದರೂ ಬಿಜೆಪಿಯಲ್ಲಿ ಮಾತ್ರ ಇನ್ನು ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಈ ಬಗ್ಗೆ ಕೆ ಎಸ್ ಈಶ್ವರಪ್ಪ ಮಾತನಾಡಿದ್ದಾರೆ. ಇದೇ ವೇಳೆ ಶಾಸಕ ಬಸನಗೌಡ ಯತ್ನಾಳ್ ಗೆ ಕಿವಿ ಮಾತು ಹೇಳಿದ್ದಾರೆ.

 

Advertisement

ಎಲ್ಲರಿಗೂ ಒಂದು ಮಾತು ಹೇಳುತ್ತೇನೆ. ಅಂಕಿ ಅಂಶಗಳಲ್ಲಿ ಸೋತಿದ್ದೇವೆ ವಿನಃ ಪರ್ಸೆಂಟೇಜ್ ನಲ್ಲಿ ಅಲ್ಲ. ಇಡೀ ಹಿಂದುತ್ವದ ಮೂಲಕ ಬಿಜೆಪಿ ಹಾಗೂ ಸಂಘಟನೆ ಬೆಳೆದಿದೆ. ಇದರ ಆಧಾರದ ಮೇಲೆ ವಿಪಕ್ಷ ನಾಯಕರ ಆಯ್ಕೆಯಾಗುತ್ತದೆ. ಆದರೆ ರಾಜ್ಯಾಧ್ಯಕ್ಷರ ನೇಮಕ ಯಾವಾಗ ಆಗುತ್ತದೆ ಗೊತ್ತಿಲ್ಲ.

ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಶೀಘ್ರವೇ ನೇಮಕವಾಗುತ್ತದೆ. ಇವತ್ತು ಸಂಜೆ ಅಥವಾ ನಾಳೆಯೊಳಗೆ ವಿಪಕ್ಷ ನಾಯಕನ ಆಯ್ಕೆಯಾಗುತ್ತದೆ. ರಾಜಕಾರಣದಲ್ಲಿ ಪ್ರತಿ ಸ್ಥಾನಕ್ಕೂ ಪೈಪೋಟಿ ಇದ್ದೇ ಇರುತ್ತದೆ. ವಿಪಕ್ಷದ ನಾಯಕನ ಆಯ್ಕೆ ಸ್ವಲ್ಪ ತಡವಾಗಿದೆ ನಿಜ ಒಪ್ಪುತ್ತೇನೆ. ಆದರೆ ಇದು ಕೇವಲ ವಿಪಕ್ಷ ನಾಯಕನ ಆಯ್ಕೆ ವಿಚಾರವಲ್ಲ. ರಾಜ್ಯ ಬಿಜೆಪಿಗೆ ಹೊಸ ತಿರುವು ನೀಡುವ ಸಮಯ ಎಂದಿದ್ದಾರೆ.

Advertisement
Tags :
bengalurufeaturedks eshwarappaopposition leadersuddioneಆಯ್ಕೆಕೆ ಎಸ್ ಈಶ್ವರಪ್ಪಬೆಂಗಳೂರುವಿಪಕ್ಷ ನಾಯಕಸುದ್ದಿಒನ್
Advertisement
Next Article