For the best experience, open
https://m.suddione.com
on your mobile browser.
Advertisement

ತಮಿಳುನಾಡಿಗೆ ನೀರು ಬಿಡುವುದನ್ನು ಖಂಡಿಸಿ ಇಂದು ಸಿಎಂ ಮನೆ ಮುಂದೆ ವಾಟಾಳ್ ಪ್ರತಿಭಟನೆ..!

12:51 PM Sep 27, 2023 IST | suddionenews
ತಮಿಳುನಾಡಿಗೆ ನೀರು ಬಿಡುವುದನ್ನು ಖಂಡಿಸಿ ಇಂದು ಸಿಎಂ ಮನೆ ಮುಂದೆ ವಾಟಾಳ್ ಪ್ರತಿಭಟನೆ
Advertisement

Advertisement
Advertisement

ಬೆಂಗಳೂರು: ನಿನ್ನೆಯೆಲ್ಲಾ ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ ಮಾಡಿ, ಹೋರಾಟ ನಡೆಸಿದ್ದಾರೆ. ಆದರೂ ಕಾವೇರಿ ನೀರು ಪ್ರಾಧಿಕಾರದಿಂದ ಮತ್ತೆ ನೀರು ಬಿಡಬೇಕೆಂದು ಆದೇಶವಾಗಿದೆ. ಇದನ್ನು ಖಂಡಿಸಿ ಇಂದು ವಾಟಾಳ್ ನಾಗರಾಜ್ ಪ್ರತಿಭಟನೆ ಸಿದ್ಧರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಪ್ರತಿಭಟಿಸಲಿದ್ದಾರೆ.

Advertisement

ಮುಂದಿನ 18 ದಿನಗಳವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುವುದಕ್ಕೆ ಆದೇಶ ನೀಡಿದೆ. ಇದನ್ನು ಖಂಡಿಸಿ, ಶುಕ್ರವಾರ ಕರ್ನಾಟಕ ಬಂದ್ ನಡೆಸಲಿದ್ದಾರೆ. ಕರ್ನಾಟಕ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯಬಾರದು, ನೀರನ್ನು ಬಿಡಬಾರದು ಎಂದೇ ವಾಟಾಳ್ ನಾಗರಾಜು ಒತ್ತಾಯಿಸಲಿದ್ದಾರೆ.

Advertisement
Advertisement

ಕಾವೇರಿ ಕೊಳ್ಳದಲ್ಲಿ ಈಗ ಜೋರು ಮಳೆ ಬಂದರೆ ಅಷ್ಟೇ ಕರ್ನಾಟಕಕ್ಕೆ‌ ಸಮಸ್ಯೆ ಆಗುವುದಿಲ್ಲ. ಆದರೆ ಈಗ ಒಂದೇ ಸಮನೆ ನೀರು ಬಿಡುತ್ತಿದ್ದೃ, ಮುಂದಿನ ದಿನಗಳಲ್ಲಿ ಕೃಷಿಗೆ ಇರಲಿ, ಕುಡಿಯುವುದಕ್ಕೂ ನೀರು ಇರುವುದಿಲ್ಲ ಎಂಬ ಆತಂಕ ನಮ್ಮ ರೈತರದ್ದು. ರಾಜ್ಯ ಸರ್ಕಾರ ಕೂಡ ಇಲ್ಲಿನ ಸಮಸ್ಯೆಯನ್ನು ಕಾವೇರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲು ಸಾಕಷ್ಟು ಸಲ ಪ್ರಯತ್ನ ಪಟ್ಟಿದೆ. ಆದರೂ ತಮಿಳುನಾಡಿನ ಪರವೇ ತೀರ್ಪು ಬರುತ್ತಿರುವುದು, ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

Advertisement
Tags :
Advertisement