For the best experience, open
https://m.suddione.com
on your mobile browser.
Advertisement

ಯಶಸ್ವಿನಿ ಕಾರ್ಡ್ ಯೋಜನೆಗೆ ಸಮಯ ವಿಸ್ತರಣೆ : ಅಪ್ಲೈ ಮಾಡಲು ಕಡೆ ದಿನಾಂಕ ಯಾವ್ದು..?

09:30 PM Mar 02, 2024 IST | suddionenews
ಯಶಸ್ವಿನಿ ಕಾರ್ಡ್ ಯೋಜನೆಗೆ ಸಮಯ ವಿಸ್ತರಣೆ   ಅಪ್ಲೈ ಮಾಡಲು ಕಡೆ ದಿನಾಂಕ ಯಾವ್ದು
Advertisement

Advertisement
Advertisement

ಬೆಂಗಳೂರು: ರಾಜ್ಯ ಸರ್ಕಾರದ ಯೋಜನೆಯಾಗಿರುವ ಯಶಸ್ವಿನಿ ಯೋಜನೆಗೆ ಯಾರಾದರೂ ಇನ್ನು ಅರ್ಜಿ ಹಾಕಿಲ್ಲ ಎಂದರೆ ಅರ್ಜಿ ಹಾಕಲು ಸಮಯಾವಕಾಶವನ್ನು ನೀಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮಾರ್ಚ್ ತಿಂಗಳ ಕೊನೆಯವರೆಗೂ ಅವಕಾಶ ನೀಡಲಾಗಿದೆ. ಹೀಗಾಗಿ ಇದರ ಲಾಭ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Advertisement

ಯಶಸ್ವಿನಿ ಕಾರ್ಡ್ ಮಾಡಿಸದೆ ಇರುವವರು ಮಾರ್ಚ್ 31ರ ತನಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ರಾಜ್ಯ ಸರ್ಕಾರದ ಈ ಹಿಂದೆ ಇದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಸಹಕಾರ ಸಂಘದ ಅಡಿಯಲ್ಲಿ, ಮರುಜಾರಿಗೊಳಿಸಿದೆ. 2023-24ನೇ ಸಾಲಿಗೆ ಈಗಾಗಲೇ ಸದಸ್ಯರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸದಸ್ಯರ ನೋಂದಣಿಗೆ ಫೆಬ್ರವರಿ ತಿಂಗಳು ಕೊನೆಯಾಗಿತ್ತು. ಆದರೆ ಇನ್ನಷ್ಟು ಜನರಿಗೆ ಅನುಕೂಲವಾಗಲೆಂದೇ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ.

Advertisement

ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮುಂಚಿತ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಅಲ್ಲದೇ ಗ್ರಾಮೀಣ ಸಹಕಾರ ಸಂಘ/ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಯೋಜನೆಯ ಫಲಾನುಭವಿ ಆಗಬಹುದಾಗಿದೆ.

Advertisement
Tags :
Advertisement