For the best experience, open
https://m.suddione.com
on your mobile browser.
Advertisement

ಸಂಕ್ರಾಂತಿ ಬಳಿಕ ಈ ಸರ್ಕಾರ ಇರಲ್ಲ.. ಕುಮಾರಸ್ವಾಮಿ ಏನೋ ಮಾಡ್ತಿದ್ದಾರೆ : ಯೋಗೀಶ್ವರ್ ಹೊಸ ಬಾಂಬ್

06:21 PM Oct 02, 2023 IST | suddionenews
ಸಂಕ್ರಾಂತಿ ಬಳಿಕ ಈ ಸರ್ಕಾರ ಇರಲ್ಲ   ಕುಮಾರಸ್ವಾಮಿ ಏನೋ ಮಾಡ್ತಿದ್ದಾರೆ   ಯೋಗೀಶ್ವರ್ ಹೊಸ ಬಾಂಬ್
Advertisement

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ಸಿಪಿ ಯೋಗೀಶ್ವರ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಸಂಕ್ರಾಂತಿ ಬಳಿಕ ಗ್ಯಾರಂಟಿ ಈ ಸರ್ಕಾರ ಚಾಲ್ತಿಯಲ್ಲಿ ಇರಲ್ಲ ಎಂದಿದ್ದಾರೆ. ಸರ್ಕಾರ ತೆಗೆಯುವುದರ ಹಿಂದೆ ಕುಮಾರಸ್ವಾಮಿ ಕೈವಾಡ ಇದೆ ಎಂದೇ ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಮತ್ತೊಂದು ರೀತಿಯ ಚರ್ಚೆ ಹುಟ್ಟುಹಾಕಿದೆ.

Advertisement
Advertisement

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಏನೋ ಮಾಡುತ್ತಿದ್ದಾರೆ. 100% ಈ ಸರ್ಕಾರ ಇರಲ್ಲ. ಈ ಸರ್ಕಾರ ಇರುವುದು ಖಂಡಿತ ಡೌಟ್. ಈ ಸರ್ಕಾರ ತೊಲಗಬೇಕು ಎಂದುಕೊಂಡಿದ್ದಾರೆ. ಕುಮಾರಸ್ವಾಮಿ ಅವರನ್ನು ಕೇಳಿ ಸರ್ಕಾರ ಏನಾಗುತ್ತೆ ಎಂಬುದನ್ನು ಎಂದು ಸರ್ಕಾರ ಬಿದ್ದೇ ಬೀಳುವ ಗ್ಯಾರಂಟಿ ನೀಡುತ್ತಿದ್ದಾರೆ.

Advertisement

ಇನ್ನು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಯಾಕಂದ್ರೆ ಕಾಂಗ್ರೆಸ್ ದಮನಕಾರಿ ಆಡಳಿತ ನಡೆಸುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಆಪರೇಶಷನ್ ಹಸ್ತ ನಡೆಸುತ್ತಿದ್ದಾರೆ. ಹೀಗಾಗಿ ಅವರನ್ನು ಎದುರಿಸಲು ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಇಬ್ಬರಿಗೂ ಅನುಕೂಲವಾಗಲಿದೆ ಎಂದಿದ್ದಾರೆ.

Advertisement
Advertisement

ಈಗಾಗಲೇ ಬಿಜೆಪಿಯ ಹಲವು ನಾಯಕರು ಕೂಡ ಲೋಕಸಭಾ ಚುನಾವಣೆಯ ಬಳಿಕ ಸರ್ಕಾರದ ಸ್ಥಿತಿ ಏನಾಗಲಿದೆಯೋ ಗೊತ್ತಿಲ್ಲ ಎಂಬ ರೀತಿಯಾದಂತ ಹೇಳಿಕೆಯನ್ನೇ ನೀಡಿದ್ದಾರೆ. ಈ ಬೆನ್ನಲ್ಲೇ ಇಂದು ಯೋಗೀಶ್ವರ್ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯ ಹಾಗೂ ಚರ್ಚೆಗೆ ಗ್ರಾಸವಾಗಿದೆ.

Advertisement
Tags :
Advertisement