ಇಂದು ನಡೆಯಬೇಕಿದ್ದ ಕಾವೇರಿ ವಿಚಾರ ಬುಧವಾರಕ್ಕೆ ಮುಂದೂಡಿಕೆ
ನವದೆಹಲಿ: ರಾಜ್ಯದಲ್ಲಿ ಮಳೆಯಿಲ್ಲದೆ ರೈತರು ಕಂಗಲಾಗಿದ್ದಾರೆ. ಕಾವೇರಿ ದಿನೇ ದಿನೇ ಕಡಿಮೆಯಾಗುತ್ತಿದ್ದಾಳೆ. ಈ ರೀತಿಯಾದಂತ ಪರಿಸ್ಥಿತಿ ಇದ್ದರು ರಾಜ್ಯ ಸರ್ಕಾರ ಮಾತ್ರ ತಮಿಳುನಾಡಿಗೆ ಪ್ರತಿದಿನ ನೀರನ್ನು ಹರಿಸುತ್ತಿರುವುದನ್ನು ರೈತರು ವಿರೋಧಿಸುತ್ತಿದ್ದಾರೆ. ರೈತರ ಜೊತೆಗೆ ಜೆಡಿಎಸ್ ಮತ್ತು ಬಿಜೆಪು ನಾಯಕರು ಕೈಜೋಡಿಸಿದ್ದಾರೆ.
ಈ ಸಂಬಂಧ ಇಂದು ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ವಿಚಾರಣೆ ನಡೆಯಬೇಕಿತ್ತು. ಇಂದು ನಡೆಯಬೇಕಿದ್ದ ವಿಚಾರಣೆ ಮುಂದೂಡಿಕೆಯಾಗಿದೆ. ಸೆಪ್ಟೆಂಬರ್6 ಕ್ಕೆ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಕಾವೇರಿ ಭಾಗದ ಜನ ಇಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಕರ್ನಾಟಕದ ಪರಿಸ್ಥಿತಿ ನೋಡಿ ತೀರ್ಪು ಕೂಡ ಕರ್ನಾಟಕದ ಪರವಾಗಿ ಬರುತ್ತೆ ಎಂಬ ನಿರೀಕ್ಷೆ ಇತ್ತು. ಆದ್ರೆ ಜಸ್ಟೀಸ್ ಗವಾಯಿ ಅವರು ಬೇರೆ ಪೀಠದಲ್ಲಿ ಇದ್ದ ಕಾರಣ, ಇಂದು ನಡೆಯಬೇಕಿದ್ದ ವಿಚಾರಣೆ ಮುಂದೂಡಿಕೆಯಾಗಿದೆ.
ಇನ್ನು ಕಾವೇರಿಗಾಗಿ ನಾಳೆ ದೇವೇಗೌಡ ಅವರ ನೇತೃತ್ವದಲ್ಲಿ ಕಾವೇರಿ ಚಳುವಳಿ ಆರಂಭವಾಗಲಿದೆ. ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಜೆಡಿಎಸ್ ಮತ್ತು ಬಿಜೆಪಿ ಸಿದ್ಧತೆ ನಡೆಸಲಿದ್ದಾರೆ. ಮಂಡ್ಯದಲ್ಲಿ ಚಳುವಳಿ ಆರಂಭವಾಗಲಿದೆ. ಇನ್ನು ಕುಮಾರಸ್ವಾಮಿ ಅವರು ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆಸ್ಪತ್ರೆಯಿಂದಾನೇ ಕಾವೇರಿ ಚಳುವಳುಗೆ ಕರೆ ನೀಡಿದ್ದಾರೆ.