2ನೇ ದಿನವೂ ಸರ್ವರ್ ಡೌನ್ : ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಸಲು ಹರಸಾಹಸ...!
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲಗಲಿ ಒಂದಾದಂತ ಗೃಹಜ್ಯೋತಿ ಯೋಜನೆಗೆ ಭಾನುವಾರದಿಂದ ಚಾಲನೆ ಸಿಕ್ಕಿದೆ. ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಿ ಸುಮಾರು 2.14 ಕೋಟಿ ಜನರಿದ್ದಾರೆ. ಆದರೆ ನಿನ್ನೆಯಿಂದ ಆರಂಭವಾದ ಅರ್ಜಿ ಸಲ್ಲಿಕೆಗೆ ಸರ್ವರ್ ಸಮಸ್ಯೆ ಎದುರಾಗಿದೆ.
ನಿನ್ನೆಯಿಂದ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಬೆಂಗಳೂರು ಒನ್, ಗ್ರಾಮ ಒನ್, ಮೆಸ್ಕಾಂ, ಬೆಸ್ಕಾಂ ಸೇರಿದಂತೆ ತಮ್ಮ ಮೊಬೈಲ್ ಗಳಲ್ಲೂ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಇದರ ನಡುವೆ ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಾಗಿಲ್ಲ. ಎರಡನೇ ದಿನವೂ ಈ ತಾಪತ್ರಯ ಮುಂದುವರೆದಿದೆ.
ಇಂದು ಎರಡನೇ ದಿನ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದೆ. ಆದರೆ ಇಂದು ಕೂಡ ಸರ್ವರ್ ಸಮಸ್ಯೆ ಸರಿಯಾಗಿಲ್ಲ. ನಿನ್ನೆ ಒಂದೇ ದಿನ 55 ಸಾವಿರ ಜನ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಸಾಲುಗಟ್ಟಿ ನಿಂತ ಸಾಕಷ್ಟು ಜನ ಕೊನೆ ಗಳಿಗೆಯಲ್ಲಿ ಬೇಸರ ಮಾಡಿಕೊಂಡು ಹೋಗುತ್ತಿದ್ದಾರೆ. ಇಂದು ಕೊಂಚ ಸುಧಾರಣೆಯಾದರೂ ಅರ್ಜಿ ತೆರೆದು ಅಕೌಂಟ್ ನಂಬರ್ ಹಾಕಿದ ಕೂಡಲೇ ಸರ್ವರ್ ಡೌನ್ ಆಗುತ್ತಿದೆ.