For the best experience, open
https://m.suddione.com
on your mobile browser.
Advertisement

ಫೆಬ್ರವರಿ 24 ರಂದು ಚಳ್ಳಕೆರೆಯಲ್ಲಿ ಪರಿಶಿಷ್ಟ ಪಂಗಡ  ಸಮಾವೇಶ : ಎ.ಮುರಳಿ

06:23 PM Feb 22, 2024 IST | suddionenews
ಫೆಬ್ರವರಿ 24 ರಂದು ಚಳ್ಳಕೆರೆಯಲ್ಲಿ ಪರಿಶಿಷ್ಟ ಪಂಗಡ  ಸಮಾವೇಶ   ಎ ಮುರಳಿ
Advertisement

Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಸುದ್ದಿಒನ್ ನ್ಯೂಸ್‌, suddione, suddione news, chitradurga, ಚಿತ್ರದುರ್ಗ,ಬೆಂಗಳೂರು, bengaluru,

ಸುದ್ದಿಒನ್, ಚಿತ್ರದುರ್ಗ ಫೆ. 22 : ಚಳ್ಳಕೆರೆಯ ವಾಲ್ಮೀಕಿ ಸಮುದಾಯ ಭವನದಲ್ಲಿ ಫೆ. 24 ರ ಶನಿವಾರದಂದು ಪರಿಶಿಷ್ಟ ಪಂಗಡದ ಮುನ್ನಡೆಯ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಎ.ಮುರಳಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ನಾಯಕರ ಜನಸಂಖ್ಯೆ ಹೆಚ್ಚಾಗಿದೆ ಅಲ್ಲದೆ ಬಿಜೆಪಿ ಸರ್ಕಾರ ಇದ್ದಾಗ ಈ ಜನಾಂಗಕ್ಕೆ ನೀಡಿರುವ ವಿವಿಧ ರೀತಿಯ ಸೌಲಭ್ಯಗಳು ಹಾಗೂ ಕೇಂದ್ರ ಸರ್ಕಾರ ನೀಡಿದ ಸೌಲಭ್ಯಗಳನ್ನು ತಿಳಿಸುವ ಸಲುವಾಗಿ ಈ ಮುನ್ನಡೆ ಸಮಾವೇಶವನ್ನು ನಡೆಸುತ್ತಿರುವುದಾಗಿ ತಿಳಿಸಿದ ಅವರು ಪರಿಶಿಷ್ಟ ಪಂಗಡದಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ  ಇದಾಗಿದೆ ಎಂದರು.

ಈ ಸಮಾವೇಶಕ್ಕೆ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜು ಬೊಮ್ಮಾಯಿ, ಮಾಜಿ ಸಚಿವರಾದ ಶ್ರೀರಾಮುಲು, ರಾಜುಗೌಡ, ಎಸ್.ಟಿ.ಘಟಕದ ರಾಜ್ಯಾಧ್ಯಕ್ಷ ಹನುಮಂತ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ.ನವೀನ್, ವೈ.ಎ ನಾರಾಯಣಸ್ವಾಮಿ, ಚಿದಾನಂದಗೌಡ, ಶಾಸಕರಾದ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ನೇರ್ಲಗುಂಟೆ ತಿಪ್ಪೇಸ್ವಾಮಿ, ಲಿಂಗಮೂರ್ತಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಇದು ಜಿಲ್ಲಾ ಮಟ್ಟದ ಸಮಾವೇಶ ಆಗಿರುವುದರಿಂದ ಪಂಚಾಯಿತಿಗೆ 25 ರಂತೆ ಪ್ರತಿ ತಾಲ್ಲೂಕಿನಿಂದ 200 ರಿಂದ 250 ಜನ ಆಯ್ದ ನಾಯಕರು ಮಾತ್ರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮುರಳಿ ತಿಳಿಸಿದರು.

ಮಾಜಿ ಶಾಸಕರಾದ ನೇರ್ಲಗಂಟೆ ತಿಪ್ಪೇಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಿಜೆಪಿ ಸರ್ಕಾರ ಏನು ಮಾಡಿದೆ ಎಂಬುದನ್ನು ತಿಳಿಸುವ ಕಾರ್ಯ ಇದಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಬೇಡ ಎಂದು ನೆಹರುರವರು ಬಡೆದಿರುವ ಪತ್ರವನ್ನು ನಮ್ಮ ಪ್ರಧಾನ ಮಂತ್ರಿಗಳು ಸದನದಲ್ಲಿ ತೋರಿಸಿದ್ದಾರೆ ಇವರಿಗೆ ಯಾರು ಅನ್ಯಾಯ ಮಾಡುತ್ತಿದ್ದಾರೆ ಎಂಬುದನ್ನು ಈ ಜನಾಂಗ ತಿಳಿಯಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿಯವರನ್ನು ಏಕವಚನದಲ್ಲಿ ಮಾತನಾಡಿದ್ದಾರೆ. ಇದು ಅವರ ನಾಗರಿಕತೆಯನ್ನು ತಿಳಿಸುತ್ತದೆ. ಈ ಜನಾಂಗವನ್ನು ಬರೀ ಚುನಾವಣೆಯಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ ನಂತರ ಅವರನ್ನು ಬಿಡಲಾಗುತ್ತದೆ. ನಮ್ಮ ಸರ್ಕಾರ ಇವರಿಗಾಗಿ ಮಾಡಿದ ಕೆಲಸಗಳನ್ನು ತಿಳಿಸುವ ಕಾರ್ಯ ಇದಾಗಿದೆ.

ಕಾಂಗ್ರೆಸ್ ನವರು ರಾಮ ಕಾಲ್ಪನಿಕ ಎಂದು ಹೇಳಿದ್ದಾರೆ ಆದರೆ ಅಧರ್ಮ ಯಾವಾಗ ಬರುತ್ತದೆ ಆಗ ನಾನು ಹುಟ್ಟಿ ಬಂದು ಅದನ್ನು ನಾಶ ಮಾಡುತ್ತೇನೆ ಎಂದು ಭಗವಂತ ತಿಳಿಸಿದ್ದಾನೆ ಅಯೋಧ್ಯಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವುದರ ಮೂಲಕ ಜನತೆಯ ಭಕ್ತಿಯನ್ನು ಹೆಚ್ಚಿಸಿದ್ದಾರೆ. ರಾಷ್ಟ್ರಪತಿಗಳಾಗಿ ದ್ರೌಪತಿ ಮುರ್ಮ ಹಾಗೂ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆಯನ್ನು ತಿಳಿಸುವ ಕಾರ್ಯವನ್ನು ಇದರಲ್ಲಿ ಮಾಡಲಾಗುವುದು ಎಂದರು.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಾಪುರ ಸುರೇಶ್, ಜಿಲ್ಲಾಧ್ಯಕ್ಷ ಶಿವಣ್ಣ, ಪರಿಶಿಷ್ಟ ಘಟಕದ ಉಪಾಧ್ಯಕ್ಷ ಅನಿತ್, ಪ್ರಧಾನ ಕಾರ್ಯದರ್ಶಿ ರಾಮದಾಸ್, ಈಶ್ವರ ಮಂಜುನಾಥ್, ತಿಪ್ಪೇಸ್ವಾಮಿ, ಸರಸ್ವತಿ ಕವನ ಕಾಂಚನ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
Advertisement