For the best experience, open
https://m.suddione.com
on your mobile browser.
Advertisement

ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಮುಖ : ಎಎಸ್ಪಿ ಎಸ್.ಜೆ.ಕುಮಾರಸ್ವಾಮಿ

05:55 PM Jul 04, 2023 IST | suddionenews
ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಮುಖ   ಎಎಸ್ಪಿ ಎಸ್ ಜೆ ಕುಮಾರಸ್ವಾಮಿ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, (ಜು.04) : ರಾಷ್ಟ್ರ ನಿರ್ಮಾಣದಲ್ಲಿ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾದದ್ದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಹೇಳಿದರು.

Advertisement

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಎನ್ ಸಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

Advertisement

ವಿಧ್ಯಾರ್ಥಿ ಜೀವನದಲ್ಲಿ NCC ಯಲ್ಲಿ ಭಾಗವಹಿಸುವಿಕೆ ಬಹಳ ಮಹತ್ವವಾದ ಪಾತ್ರವನ್ನು ವಹಿಸುತ್ತದೆ, ಶಿಸ್ತಿನ ಸಿಪಾಯಿ ರೀತಿಯಲ್ಲಿ ಕೆಡೆಟ್ ಗಳು ಇರುವುದನ್ನು ಕಾಣಬಹುದು.‌ಯುವಕರು ಯಾವುದೇ ಕಾರಣಕ್ಕೂ ದುಷ್ಚಟಗಳಿಗೆ ಒಳಗಾಗಬಾರದು, NCC ಯಿಂದ ಸಾಕಷ್ಟು ಕೇಂದ್ರ ಹಾಗೂ ರಾಜ್ಯ ಗಳಲ್ಲಿ ಉದ್ಯೋಗ ಇದರ ಕೊಟಾದಡಿ ಸಿಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲೆಫ್ಟಿನೆಂಟ್ , NCC ಅಧಿಕಾರಿ ಡಾ.ಎಸ್.ಆರ್.ಲೇಪಾಕ್ಷ ಮಾತನಾಡುತ್ತಾ, NCC ಶೇ. 100 ಫಲಿತಾಂಶ ಪಡೆಯುವ ಮೂಲಕ ಸರ್ಕಾರಿ ಕಲಾ ಕಾಲೇಜು ಇತಿಹಾಸ ಸೃಷ್ಟಿಸಿದೆ.

ಮೊಟ್ಟಮೊದಲ ಬಾರಿಗೆ C certificate ಫಲಿತಾಂಶ ಹಾಗೂ B certificate ಫಲಿತಾಂಶ ಬಂದಿದ್ದು,  ದಾವಣಗೆರೆ ಬಟಾಲಿಯನ್ ನಲ್ಲಿ ಕಳೆದ ವರ್ಷ ಈ ಕಾಲೇಜು ಬೆಸ್ಟ್ ಯುನಿಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ವಿದ್ಯಾರ್ಥಿಗಳಿಗೆ ದೇಶ ಪ್ರೇಮ, ಸಮಾಜ ಸೇವೆ, ನಾಯಕತ್ವ, ಹೀಗೆ ಹತ್ತು ಹಲವಾರು ಉಪಯೋಗ NCC ಯಿಂದ ಆಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಪ್ರಾಂಶುಪಾಲರಾದ ಆದ ಶ್ರೀ ಬಿ.ಟಿ.ತಿಪ್ಪೇರುದ್ರಸ್ವಾಮಿ, ಮಾತನಾಡಿ ಈ ಫಲಿತಾಂಶ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಾಧನೆ ವಿಧ್ಯಾರ್ಥಿಗಳು ಮಾಡಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಸುಧಾಕರ, ಶ್ರೀಮತಿ ಸುಧಾದೇವಿ, ಪ್ರಾಂಶುಪಾಲರು, ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಧಾದೇವಿ, ನ್ಯೂಸ್18 ವರದಿಗಾರರಾದ‌ ವಿನಾಯಕ ತೊಡರನಾಳ್ ಅವರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಎಲ್.ನಾಗರಾಜಪ್ಪ, ಪ್ರೊ.ಜಿ.ಡಿ.ಸುರೇಶ್, ಐಕ್ಯೂಎಸಿ, ಸಂಚಾಲಕರು,ಮ್ಯಾನೇಜರ್ ಮಾರ್ಟಿನ್ ಹಾಗೂ ಲೆಫ್ಟಿನೆಂಟ್ ದಿನೇಶ್ ಕುಮಾರ್, ಸತೀಶ್ ನಾಯ್ಕ್,ಹಾಗೂ ಅಧ್ಯಾಪಕರು ಭೋದಕೇತರ ಸಿಬ್ಬಂದಿ, ಕೆಡೆಟ್ ಗಳು ಹಾಜರಿದ್ದರು. ಎಸ್‌.ಆಂಜನೇಯ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement
Tags :
Advertisement