For the best experience, open
https://m.suddione.com
on your mobile browser.
Advertisement

ಬಂಧನದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ: ಅಭಿಮಾನಿಗಳಿಗೆ ದರ್ಶನ್ ಹೇಳಿದ್ದೇನು..?

08:45 PM Jun 22, 2024 IST | suddionenews
ಬಂಧನದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ  ಅಭಿಮಾನಿಗಳಿಗೆ ದರ್ಶನ್ ಹೇಳಿದ್ದೇನು
Advertisement

Advertisement

Advertisement

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಸುಲಭವಾಗಿ ಟ್ರ್ಯಾಕ್ ಆಗಿದೆ. ಕಳೆದ 12 ದಿನದಿಂದ ಪೊಲೀಸ್ ಕಸ್ಟಡಿಯಲ್ಲಿದ್ದರು. ಹೈಪ್ರೊಫೈಲ್ ಕೇಸ್ ಆಗಿದ್ದರಿಂದ ಸರ್ಕಾರ ಕೂಡ ಯಾವುದೇ ವಿಚಾರಗಳಿಗೂ ಗಮನ ಕೊಡದೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು. ಹೀಗಾಗಿ ಪೊಲೀಸರು ಕೂಡ ದರ್ಶನ್ ಅಂಡ್ ಗ್ಯಾಂಗ್ ಅನ್ನು ಎರಡು ಬಾರಿ ಕಸ್ಟಡಿಗೆ ತೆಗೆದುಕೊಂಡು ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದೆ. ಇಂದು ಕಸ್ಟಡಿ ಮುಗಿದ ಹಿನ್ನೆಲೆ ದರ್ಶನ್ ಸೇರಿದಂತೆ ನಾಲ್ವರನ್ನು ಕೋರ್ಟ್ ಮುಂದೆ ಹಾಜರುಪಡಿಸಿತ್ತು. ಕೋರ್ಟ್ ಹದಿಮೂರು ದಿನಗಳ ಕಾಲ ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಅವರ ಮೂರು ಜನ ಸ್ನೇಹಿತರು ಕೂಡ ಜೈಲು ಪಾಲಾಗಿದ್ದಾರೆ.

Advertisement

ಇನ್ನು ದರ್ಶನ್ ಅರೆಸ್ಟ್ ಆದಾಗಿನಿಂದ ಒಂದು ದಿನವೂ ಮಾತನಾಡಿರಲಿಲ್ಲ. ಆದರೆ ಇಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ. ಪರಪ್ಪನ ಅಗ್ರಹಾರ ಜೈಲಿಗೆ ಹೋಗುವ ಮುನ್ನ ಕೈಬೀಸಿದ್ದು, ಪ್ಲೈನ್ ಕಿಸ್ ನೀಡಿದ್ದಾರೆ. ಬಳಿಕ ನನಗೇನು ಆಗುವುದಿಲ್ಲ ಎಂದಿದ್ದಾರೆ.

Advertisement
Advertisement

ಪೊಲೀಸ್ ಗಾಡಿಯಲ್ಲಿ ಕೂತು, ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಈ ವೇಳೆ ಮಾತನಾಡಿದ್ದು, ನನಗೆ ಏನು ಆಗುವುದಿಲ್ಲ ಹೆದರಬೇಡಿ ಎಂದು ಹೇಳಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮಿಡೀಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳಿಗೂ ಕೊಂಚ ರಿಲ್ಯಾಕ್ಸ್ ಆಗಿದೆ.

ದರ್ಶನ್ ಪೊಲೀಸರ ಕಸ್ಟಡಿಗೆ ಹೋದಾಗಿನಿಂದ ಅಭಿಮಾನಿಗಳು ಆತಂಕದಲ್ಲಿದ್ದರು. ಪೊಲೀಸ್ ಠಾಣೆಯಲ್ಲಿ ಬೇರೆ ಏನು ಕಾಣದ ರೀತಿ ಶಾಮಿಯಾನ ಹಾಕಿದ್ದರು. ಕಸ್ಟಡಿಗೆ ತೆಗೆದುಕೊಳ್ಳುತ್ತಿದ್ದ ಕಾರಣ ಏನಾಗುತ್ತಿದೆ ಎಂಬುದನ್ನು ತಿಳಿಯಲಾಗದೆ ಅಭಿಮಾನಿಗಳು ಸಂಕಟ ಪಡುತ್ತಿದ್ದರು. ಇಂದು ಖುದ್ದು ದರ್ಶನ್, ನನಗೇನು ಆಗಲ್ಲ ಎಂದು ಹೇಳಿರುವುದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.

Advertisement
Tags :
Advertisement