For the best experience, open
https://m.suddione.com
on your mobile browser.
Advertisement

ರಾಜ್ಯಾದ್ಯಂತ ಮುಂದಿನ ಒಂದು ವಾರಗಳ ಕಾಲ ಮಳೆ ಸಾಧ್ಯತೆ

04:19 PM Sep 01, 2023 IST | suddionenews
ರಾಜ್ಯಾದ್ಯಂತ ಮುಂದಿನ ಒಂದು ವಾರಗಳ ಕಾಲ ಮಳೆ ಸಾಧ್ಯತೆ
Advertisement

Advertisement

ಬೆಂಗಳೂರು: ಮಳೆಗಾಗಿ ರೈತರು ಕಣ್ಣರಳಿಸಿ ಕಾಯುತ್ತಿದ್ದರು. ಹೊಲ ಉಳುಮೆ ಮಾಡಿ, ಬೀಜ ಬಿತ್ತನೆ ಬೀಜ ಹಾಕಿ ಮಳೆಗಾಗಿ ಕಾಯುತ್ತಿದ್ದಾರೆ. ನಿಟ್ಟುಸಿರು ಬಿಟ್ಟಂತೆ ನಿನ್ನೆಯಿಂದ ರಾಜ್ಯದೆಲ್ಲೆಡೆ ಮಳೆರಾಯ ದರ್ಶನ ಕೊಟ್ಟಿದ್ದಾನೆ. ರೈತರೆಲ್ಲ ಸಂತಸದಲ್ಲಿ ಮುಳುಗಿದ್ದಾರೆ. ಮುಂದಿನ ಒಂದು ವಾರಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ‌ ನೀಡಿದೆ.

Advertisement

Advertisement
Advertisement

ಬೆಂಗಳೂರಿನಲ್ಲಂತು ರಾತ್ರಿ ಇಡೀ ಮಳೆ ಸುರಿದಿದೆ. ಹಲವೆಡೆ ಪಾರ್ಕ್ ಗಳಲ್ಲೂ ಮಳೆ ನೀರು ನಿಂತು ಜಲಾವೃತಗೊಂಡಿದೆ. ಇಂದು ಕೂಡ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಷ್ಟು ದಿನ ವಾಡಿಕೆಯಂತೆ ಮಳೆಯಾಗಿಲ್ಲ. ಆದ್ರೆ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಯಂತೆ ಮಳೆಯಾಗಲಿದೆ ಎಂಬ ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ವಾಡಿಕೆಯಂತೆ ಮಳೆ ಆಗದ ಹಿನ್ನೆಲೆ ಡ್ಯಾಂಗಳು ಖಾಲಿಯಾಗುತ್ತಿವೆ. ಅದರಲ್ಲೂ ಕೆಆರ್ಎಸ್ ಡ್ಯಾಂನಲ್ಲಿ ಮಳೆ ಇಲ್ಲದೆ ಒಂದು ಕಡೆ ನೀರಿಲ್ಲ, ಮತ್ತೊಂದು ಕಡೆ ತಮಿಳುನಾಡಿಗೆ ಬೇರೆ ನೀರು ಹರಿಸುತ್ತಿರುವ ಕಾರಣ ದಿನೇ ದಿನೇ ನೀರು ಖಾಲಿಯಾಗ್ತಾ ಇದೆ. ಇನ್ಮುಂದೆ ಆದ್ರೂ ಮಳೆ ವಾಡಿಕೆಯಂತೆ ಸುರಿದರೆ ಡ್ಯಾಂಗಳು ತುಂಬಲಿವೆ.

Tags :
Advertisement